ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ :ಆದಿತ್ಯ ಆಳ್ವ ಸೇರಿದಂತೆ ಐವರಿಗೆ ಜಾಮೀನು

Team Newsnap
1 Min Read

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ, ರಾಗಿಣಿಗೆ ಕೋರ್ಟ್ ಜಾಮೀನು ನೀಡಿದ ಬಳಿಕ ಈಗ ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆದಿತ್ಯ ಆಳ್ವಾ ಸೇರಿದಂತೆ ಐದು ಮಂದಿಗೆ ಎನ್ ಡಿ ಪಿಎಸ್ ಕೋರ್ಟ್ ಜಾಮೀನು ನೀಡಿದೆ.

ಆದಿತ್ಯ ಆಳ್ವಾ ಸೇರಿದಂತೆ ಐವರು ಆರೋಪಿಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಎನ್ ಡಿ ಪಿಎಸ್ ಕೋರ್ಟ್ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ, ಜೈಲು ಸೇರಿದ್ದಂತಹ ಐವರಿಗೆ ಷರತ್ತು ಬದ್ದ ಜಾಮೀನು ನೀಡಿದೆ.

ಆದಿತ್ಯ ಆಳ್ವಾ, ರವಿಶಂಕರ್, ರಾಹುಲ್, ಆದಿತ್ಯ ಅಗರ್ವಾಲ್ ಮತ್ತು ವಿರೇನ್ ಖನ್ನಾಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

Share This Article
Leave a comment