December 23, 2024

Newsnap Kannada

The World at your finger tips!

mylar

ಕೊರೋನಾ ಕಾರಣಕ್ಕಾಗಿ ಮೈಲಾರ ಜಾತ್ರಾ ಮಹೋತ್ಸವ ರದ್ದು

Spread the love

2021 ರ ಫೆ 19 ರಿಂದ ಮಾ. 2 ತನಕ ನಡೆಯಲಿರುವ ಹೂವಿನ ಹಡಗಲಿ ತಾಲೂಕಿನ ಮೈಲಾರ ಜಾತ್ರೆಯನ್ನು ರದ್ದು ಮಾಡಿ ಜಿಲ್ಲಾಡಳಿತ ಇಂದು ಆದೇಶ ಹೊರಡಿಸಿದೆ.

ಮೈಲಾರ ಗ್ರಾಮದ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಯನ್ನು ವೀಕ್ಷಿಸಲು ರಾಜ್ಯದ ಹಲವು ಭಾಗದಿಂದ ಭಕ್ತರು ಬರುತ್ತಾರೆ.
ಈ ಜಾತ್ರೆಯಲ್ಲಿ ಸುಮಾರು 15 ಅಡಿ ಮರದ ಬಿಲ್ಲನ್ನು ಏರಿ ಕಾರ್ಣಿಕ ನುಡಿಯುವ ಗೊರವಯ್ಯನನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಭವಿಷ್ಯ ಆಲಿಸುತ್ತಿದ್ದರು.

ಮಾರ್ಚ್ 1 ರಂದು ಕಾರ್ಣಿಕೋತ್ಸವ ನಡೆಯಬೇಕಿತ್ತು. ಆದರೆ ಕೊರೊನಾ ಸೋಂಕಿನ ಹಿನ್ನೆಲೆ ಫೆ.19 ರಿಂದ ಮಾ 2 ರವರೆಗೂ ನಡೆಯಬೇಕಿದ್ದ ಜಾತ್ರಾ ಮಹೋತ್ಸ ರದ್ದು ಮಾಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!