February 20, 2026

Newsnap Kannada

The World at your finger tips!

lapad

ಹೆಚ್ಚು ಮತ ಪಡೆದ ನಲಪಾಡ್​ ಅಸಿಂಧು: ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಜಯ

Spread the love

ಯೂತ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಆಯ್ಕೆಯಾಗಿದ್ದಾರೆ. ಮೊಹಮ್ಮದ್ ನಲಪಾಡ್ ಹೆಚ್ಚಿನ ಮತಗಳಿಸಿದರೂ ಎಐಸಿಸಿ ಅವರನ್ನು ಅಸಿಂಧು ಎಂದು ಪ್ರಕಟಿಸಿದೆ

ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ.

ಈ ಚುನಾವಣೆಯಲ್ಲಿ ರಕ್ಷಾ ರಾಮಯ್ಯ 57,271 ಮತಗಳನ್ನು ಪಡೆದಿದ್ದಾರೆ. ಮೊಹಮ್ಮದ್ ನಲಪಾಡ್- 64,203 ಮತಗಳನ್ನು ಪಡೆದಿದ್ದಾರೆ. ಆದರೂ ಸಹ ಅತಿಹೆಚ್ಚು ಮತ ಪಡೆದ ನಲ್ಪಾಡ್ ನನ್ನು ಅಸಿಂಧು ಎಂದು ಎಐಸಿಸಿ ಘೋಷಿಸಿ ಇಂಡಿಯನ್ ಯೂತ್ ಕಾಂಗ್ರೆಸ್​ನ ಅಧಿಕೃತ ವೆಬ್​ಸೈಟ್​ನಲ್ಲಿ ಈ ಫಲಿತಾಂಶ ಪ್ರಕಟ ಮಾಡಿದೆ.

saraswathi

ನಲಪಾಡ್​ರನ್ನು ಅಸಿಂಧುಗೊಳಿಸಲು ಸ್ಕೈಬಾರ್ ಪ್ರಕರಣವೇ ಕಾರಣ ಎನ್ನಲಾಗಿದೆ. ಈ ಹಿಂದೆ ನಗರದ ಸ್ಕೈಬಾರ್​ನಲ್ಲಿ ವಿದ್ವತ್ ಎಂಬಾತನ ಮೇಲೆ ನಲಪಾಡ್ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು.

error: Content is protected !!