ಜಿ.ಟಿ. ದೇವೇಗೌಡರು ಈಗ ಬೇರೆ ಪಕ್ಷಕ್ಕೆ ಹೋಗಿ ಮತ್ತೆ ಜೆಡಿಎಸ್‌ಗೆ ವಾಪಸ್ ಬಂದರೆ ಖಂಡಿತವಾಗಿಯೂ ಸೇರಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮೈಸೂರಿನಲ್ಲಿ ಶಪಥ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿಕೆ, ಜಿ ಟಿ ದೇವೇಗೌಡರು ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಜೆಡಿಎಸ್, ರಾತ್ರಿ ಬಿಜೆಪಿಯವರ ಮನೆಗಳಿಗೆ ಹೋಗ್ತಾರೆ ಎಂದು ಲೇವಡಿ ಮಾಡಿದರು.
ಎಲ್ಲರಲ್ಲೂ ವಿಶ್ವಾಸಗಳಿಸುವ ತಂತ್ರ ಈ ಜಿಟಿಡಿಯದ್ದು. ಅದಕ್ಕೆ ಎಲ್ಲಾ ಕಡೆ ಓಡಾಡ್ತಿದ್ದಾರೆ. ಎಲ್ಲೂ ಗಿಟ್ಟಲ್ಲ ಅಂದ್ರೆ ಕೊನೆಗೆ ನಮ್ಮ ಹತ್ತಿರ ಬರುತ್ತಾರೆ. ಎಲ್ಲಸ ಸುತ್ತು ಹಾಕಿ ಕೊನೆಗೆ ವಾಪಸ್ ಬಂದಾಗ ಜೆಡಿಎಸ್ ಸ್ವೀಕರಿಸೋದಿಲ್ಲ. ನಾನು ರಾಜಕಾರಣದಲ್ಲಿ ಇವರು ತನಕ ಜಿಟಿಡಿಗೆ ಮತ್ತೆ ಜೆಡಿಎಸ್‌ಗೆ ರ್ರೀ ಎಂಟ್ರಿ ಇಲ್ಲ ಎಂದು ಖಾರವಾಗಿ ಎಚ್ಚರಿಕೆ ನೀಡಿದರು.
ಕೆಲವು ನಾಯಕರು ಅವರಿಗೆ ಸ್ವಲ್ಪ ಸಮಯ ಕೊಡಿ ಅಂತ ದುಂಬಾಲು ಬಿದ್ದರು. ಅದಕ್ಕೆ ಅವರಿಗೆ ಬದಲಾವಣೆ ಆಗಲು ಸಾಕಷ್ಟ ಸಮಯ ಕೊಟ್ಟೆವು. ಆದ್ರೆ ಇನ್ನು ಸಮಯ ಕೊಡೋಕೆ ಆಗೋಲ್ಲ. ಇನ್ನು ಇವರ ಆಟ ನಡೆಯೋಲ್ಲ ಎಂದರು.
ಇನ್ನೂ ಟೈಂ ಕೊಡಲ್ಲ : ಪಕ್ಷಕ್ಕೆ ಡ್ಯಾಮೇಜ್ ಜಾಸ್ತಿ ಆಗುತ್ತೆ:
ಮೈಸೂರಿನ ಜಲದರ್ಶಿನಿಯಲ್ಲಿ ಸಾ.ರಾ.ಮಹೇಶ್ ಭೇಟಿ ಮಾಡಿದ್ದಾಗಲೂ ಇದೆ ಹೇಳಿದರು. ಸಾ.ರಾ.ಮಹೇಶ್ ಸಹ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು.. ಆದರೆ ಇವರು ಒಳಗೊಂದು ಮಾತನಾಡುತ್ತಾರೆ. ಹೊರಗೆ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಲೇ ಇರುತ್ತಾರೆ. ಈಗ ಆಗಿರುವ ಡ್ಯಾಮೇಜ್ ಸಾಕು ಮತ್ತೆ ಇವರಿಗೆ ಟೈಂ ಕೊಡೋಕೆ ಸಾಧ್ಯವಿಲ್ಲ ಎಂದು ಎಚ್ ಡಿಕೆ ಸ್ಪಷ್ಟವಾಗಿ ಹೇಳಿದರು.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ