November 22, 2024

Newsnap Kannada

The World at your finger tips!

sinhuri kere

ಕೆರಗಳ್ಳಿ ಕೆರೆ ಮತ್ತು ಅಯ್ಯಜ್ಜನಹುಂಡಿ ಕೆರೆ ಕಾಯಕಲ್ಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸೂಚನೆ

Spread the love

ಮೈಸೂರಿನ ಕೆರಗಳ್ಳಿ ಕೆರೆ, ದಟ್ಟಗಳ್ಳಿ ಸಮೀಪದ ಅಯ್ಯಜನಗುಂಡಿ ಕೆರೆ ಮತ್ತು ಅವುಗಳಿಗೆ ಹೊಂದಿಕೊಂಡಂತಿರುವ ಕೆರೆಗಳಿಗೆ ಎರಡು ತಿಂಗಳೊಳಗಾಗಿ ಕಾಯಕಲ್ಪ ನೀಡಿ, ಕೆರೆ ಸ್ವರೂಪದಲ್ಲಿ ಕಾಣುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

sindhuri kere 1

ಬುಧವಾರ ಅಯ್ಯಜನಗುಂಡಿ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ಈ ಕೆರೆಗಳಿಗೆ ಕಾಯಕಲ್ಪ ನೀಡುವ ಸಂಬಂಧ ಮುಡಾ, ಮಹಾನಗರ ಪಾಲಿಕೆ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೆಲಸ ವಹಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆರಗಳ್ಳಿ ಕೆರೆಯಲ್ಲಿ ಮೆಕ್ಕಲು ತೆಗೆಯಬೇಕು, ಬೇಲಿ ಹಾಕಬೇಕು. ಚರಂಡಿ ನೀರು ಒಳಚರಂಡಿಯ ಮೂಲಕವೇ ಹರಿಯುವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಈ ಕೆರೆಗಳಿಗೆ ಬದು ನಿರ್ಮಾಣ ಮಾಡಿ, ನೀರು ತುಂಬಿಸುವ ಕೆಲಸವನ್ನು ಸಣ್ಣ ನೀರಾವರಿ ಇಲಾಖೆ ಮಾಡುವಂತೆ ತಿಳಿಸಿದರು. ಕೆರೆಗಳ ಸಮೀಪ ಕಟ್ಟೆ ತ್ಯಾಜ್ಯವನ್ನು ಯಾರೂ ಹಾಕಬಾರದು ಎಂಬ ಫಲಕವನ್ನು ಮಹಾನಗರ ಪಾಲಿಕೆ ಅಳವಡಿಸಬೇಕು. ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಅಧೀಕ್ಷಕ ಇಂಜಿನಿಯರ್ ಶಂಕರ್, ತಹಶೀಲ್ದಾರ್ ರಕ್ಷಿತ್, ಮಹಾನಗರ ಪಾಲಿಕೆ ವಲಯ 3 ರ ಆಯುಕ್ತ ಸತ್ಯಮೂರ್ತಿ ಇತರರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!