ಎಟಿಎಂಗೆ ತುಂಬಲು ತಂದಿದ್ದ ಹಣದಲ್ಲಿ 60 ಲಕ್ಷ ದೋಚಿಕೊಂಡು ಚಾಲಕ ಪರಾರಿ

Team Newsnap
2 Min Read

ಎಟಿಎಂಗೆ ಹಣ ತುಂಬಿಸಲು ಕೊಂಡೊಯ್ಯುವ ವಾಹನದ ಚಾಲಕನೊಬ್ಬ 60 ಲಕ್ಷಕ್ಕೂ ಹೆಚ್ಚು ಹಣ ದೋಚಿಕೊಂಡು ಚಾಲಕ ಎಸ್ಕೇಪ್ ಆದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ದೊಡ್ಡಬಳ್ಳಾಪುರ ಮೂಲದ ಯೋಗೀಶ್ ಹಣ ಕದ್ದ ಆರೋಪಿ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಯೋಗೇಶ್​ ಸೆಕ್ಯೂಲರ್ ವ್ಯಾಲ್ಯೂ ಎಜೆನ್ಸಿಯ ವಾಹನದ ಚಾಲಕನಾಗಿದ್ದ. ಏಜೆನ್ಸಿಯ ಸಿಬ್ಬಂದಿ ಎಟಿಎಂಗೆ ಹಣ ತುಂಬಿಸುವುದು ಹಾಗೂ ಡೆಪಾಸಿಟ್ ಮಷಿನ್​​ನಿಂದ ಹಣ ಕಲೆಕ್ಷನ್ ಮಾಡುತ್ತಿದ್ದ.

ಮಂಗಳವಾರ ಮಧ್ಯಾಹ್ನ ಸುಬ್ರಮಣ್ಯ ನಗರಕ್ಕೆ ತೆರಳಿದ್ದ ವೇಳೆ ಗನ್​ಮ್ಯಾನ್​ಗಳು ಎಟಿಎಂ ಕೇಂದ್ರದೊಳಗೆ ಹೋಗಿ ದ್ದಾಗ ವ್ಯಾನ್ ಚಾಲಕ ಯೋಗೇಶ್ ಬ್ಯಾಗ್​​ನಲ್ಲಿದ್ದ ಹಣದಲ್ಲಿ ತನ್ನ ಕೈಗೆ ಸಿಕ್ಕಷ್ಟು ತೆಗೆದುಕೊಂಡು, ವಾಹನವನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದಾನೆ.

ಕಳ್ಳತನಕ್ಕೆ ಮೊದಲೇ ಪ್ಲಾನ್ ಮಾಡಿದ್ದ ಆತ, ಸಿಸಿಟಿವಿ ಕನೆಕ್ಷನ್ ತಪ್ಪಿಸಿದ್ದ. ಚಾಲಕನ ಸುಳಿವು ಸಿಗದ ಹಿನ್ನೆಲೆ ಏಜೆನ್ಸಿ ಇಂದು ಪೊಲೀಸರಿಗೆ ದೂರು ನೀಡಿದೆ. ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share This Article
Leave a comment