November 24, 2024

Newsnap Kannada

The World at your finger tips!

covidVaccine

ಕೋವಿಡ್-೧೯ ಲಸಿಕೆ ಪಡೆದ ಪೌರ ಕಾರ್ಮಿಕರೊಬ್ಬರು ಎರಡೇ ಗಂಟೆಯಲ್ಲಿ ಸಾವು

Spread the love

ಕೋವಿಡ್-೧೯ ಲಸಿಕೆ ಪಡೆದ ಎರಡೇ ಗಂಟೆಯಲ್ಲಿ ಪೌರ ಕಾರ್ಮಿಕರೊಬ್ಬರು ಗುಜರಾತ್‌ನ ವಡೋದರಾದಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

ಜಿಗ್ನೇಶ್ ಸೋಲಂಕಿ(೩೦) ಮೃತ ಪೌರಕಾರ್ಮಿಕರಾಗಿದ್ದು, ವಡೋದರಾ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ (ವಿಎಂಸಿ) ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಸಾವಿಗೆ ಕೋವಿಡ್-೧೯ ಲಸಿಕೆಯೇ ಕಾರಣವಿರಬಹುದು ಎಂದು ಮೃತರ ಕುಟುಂಬ ಸದಸ್ಯರು ಶಂಕಿಸಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿಯಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ಆದೇಶಿಸಿದ್ದಾರೆ.

ಭಾನುವಾರ ಬೆಳಗ್ಗೆ ಸೋಲಂಕಿ ಅವರಿಗೆ ಲಸಿಕೆ ನೀಡಲಾಗಿತ್ತು. ಕೆಲವೇ ಗಂಟೆಗಳ ಬಳಿಕ ಅವರು ಮನೆಯಲ್ಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಎಸ್‌ಎಸ್ಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋವಿಡ್-೧೯ ಲಸಿಕೆಯೇ ಸಾವಿಗೆ ಕಾರಣ ಎಂಬುದನ್ನು ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ಮೃತರು ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದರು. ೨೦೧೬ ರಿಂದ ಅವರು ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳದ ಕಾರಣ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ತಿಳಿಸಿದ್ದಾರೆ.

ಮೃತರ ಪತ್ನಿ ದಿವ್ಯಾ ಮಾತನಾಡಿ, ಅವರು ಲಸಿಕೆ ಹಾಕಿಸಿಕೊಳ್ಳಲು ತೆರಳುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಈ ಕುರಿತು ನಾವು ಚರ್ಚೆ ಸಹ ಮಾಡಿರಲಿಲ್ಲ. ಲಸಿಕೆ ಹಾಕಿಸಿಕೊಂಡ ನಂತರ ಮನೆಗೆ ಬಂದು ಮಗಳ ಜೊತೆ ಆಟವಾಡುವಾಗ ಕುಸಿದು ಬಿದ್ದರು. ಅವರ ಸಾವಿಗೆ ಕೋವಿಡ್ ಲಸಿಕೆಯೇ ಕಾರಣವಾಗಿರಬಹುದು’ ಎಂದು ಹೇಳಿದ್ದಾರೆ.

ಎಸ್‌ಎಸ್ಜಿ ಆಸ್ಪತ್ರೆಯ ಡಾ. ರಂಜನ್ ಐಯ್ಯರ್ ಮಾತನಾಡಿ, ಸೋಲಂಕಿ ಅವರು ಸ್ಥಳೀಯ ಅಡಳಿತ ಸ್ಥಾಪಿಸಿದ್ದ ಬೂತ್ನಲ್ಲಿ ಸೋಲಂಕಿಗೆ ಕೋವಿಡ್-೧೯ ಲಸಿಕೆ ನೀಡಲಾಯಿತು. ಬಳಿಕ ಅರ್ಧ ಗಂಟೆ ಅವರನ್ನು ಅಲ್ಲಿಯೇ ಮೇಲ್ವಿಚಾರಣೆ ಮಾಡಲಾಯಿತು. ಅವರಿಗೆ ಯಾವುದೇ ಅಡ್ಡಪರಿಣಾಮಗಳ ಲಕ್ಷಣಗಳು ಕಂಡುಬಂದಿರಲಿಲ್ಲ. ಬಳಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎಂದು ಹೇಳಿಕೆ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!