November 24, 2024

Newsnap Kannada

The World at your finger tips!

acb 1

7 ಅಧಿಕಾರಿಗಳ ನಿವಾಸಗಳ ಮೇಲೆ 30 ಕಡೆ ದಾಳಿ – 2021 ರ ವರ್ಷದಲ್ಲಿ ಮೊದಲ ಬೇಟೆ

Spread the love

ರಾಜ್ಯದಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡ 7 ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದೆ.

ಬೆಂಗಳೂರು ನಗರ , ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ , ಚಿತ್ರದುರ್ಗ ಮತ್ತು ಕಲ್ಬುರ್ಗಿಯಲ್ಲಿ ಬೆಳಗ್ಗೆ 6 ಗಂಟೆಗೆ ಏಕ ಕಾಲದಲ್ಲಿ ಜಿಲ್ಲಾ ಎಸ್ಪಿಗಳ ನೇತೃತ್ವದಲ್ಲಿ ಸುಮಾರು 30 ಕಡೆ ಎಸಿಬಿ ದಾಳಿ ನಡೆಸಿದೆ.

ಯಾವ ಯಾವ ಅಧಿಕಾರಿಗಳ ನಿವಾಸದ ಮೇಲೆ ದಾಳಿ:

ಬಲೆಗೆ ಬಿದ್ದ ಅಧಿಕಾರಿಗಳನ್ನು ಧಾರವಾಡದ ಶಿಂಗ್ಗಾವಿ ಸಣ್ಣ ನೀರಾವರಿ ಕಾರ್ಯಕಾರಿ ಅಭಿಯಂತರ (ಇಇ) ದೇವರಾಜ್ ಶಿಗ್ಗಾಂವಿ, ಬೆಂಗಳೂರು ಸಹಕಾರಿ ಇಲಾಖೆಯ ವಲಯ ಜಂಟಿ ರಿಜಿಸ್ಟ್ರಾರ್ ಪಾಂಡುರಂಗ ಗಾರ್ಗರ್, ಮಂಗಳೂರು ಮಹಾನಗರ ಪಾಲಿಕೆ ನಗರ ಯೋಜನೆಯ ಜಂಟಿ ನಿರ್ದೇಶಕ ಕೆ.ವಿ.ಜಯರಾಜ್, ಕೋಲಾರದ ಆರೋಗ್ಯ ಇಲಾಖೆ ಡಿಎಚ್‍ಒ ಡಾ.ಎಸ್.ಎನ್.ವಿಜಯಕುಮಾರ್, ಕೊಪ್ಪಳದ ಕೆಐಎಂಎಸ್ ಆಸ್ಪತ್ರೆಯ ಪ್ರಾಮೋಲಜಿ ವಿಭಾಗದ ಎಚ್‍ಒಡಿ ಡಾ.ಶ್ರೀನಿವಾಸ್, ಮಾಗಡಿ ಉಪ ವಲಯದ ಜಂಟಿ ಜೂನಿಯರ್ ಇಂಜಿನಿಯರ್ ಚನ್ನಬಸವಪ್ಪ ಮತ್ತು ಧಾರವಾಡದ ಅರಣ್ಯ ಇಲಾಖೆಯ ಎಸಿಎಫ್ ಶ್ರೀನಿವಾಸ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು.

ಈ ವರ್ಷದ ಪ್ರಾರಂಭದಲ್ಲೇ ಎಸಿಬಿ ದೊಡ್ಡ ದಾಳಿ ನಡೆಸಿದ್ದಾರೆ . ಅಧಿಕಾರಿ ಗಳ ಬಗ್ಗೆ ಬಂದಿದ್ದ ದೂರುಗಳನ್ನು ಆದರಿಸಿ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ.

ಅಕಾರಿಗಳ ಮನೆ , ಕಚೇರಿ ಹಾಗೂ ಸಂಬಂಕರ, ಸ್ನೇಹಿತರ ನಿವಾಸಗಳ ಮೇಲೂ ದಾಳಿ ನಡೆದಿದೆ, ಹಲವು ಕಡೆ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಹಿತಿ ಹೊರ ಬಂದಿದೆ.

ಕೆಜಿ ಗಟ್ಟಲೆ ಬಂಗಾರ, ಅಪಾರ ಆಸ್ತಿ:

ಕೃಷಿ ಜಮೀನು, ನಿವೇಶನಗಳ ದಾಖಲೆಗಳು ಸುಮಾರು ಕೆಜಿ ಚಿನ್ನಾಭರಣಗಳು, ಐಷಾರಾಮಿ ವಾಹನಗಳು ಸೇರಿದಂತೆ ಭಾರೀ ಪ್ರಮಾಣದ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಲಾಗಿದೆ. ಪ್ರಾರಂಭಿಕ ಮಾಹಿತಿಯ ಪ್ರಕಾರ ಬೆಂಗಳೂರಿನ ಪಾಂಡುರಂಗ ಗಾರ್ಗರ್ ಅವರ ಆರ್‍ಪಿಸಿ ಲೇ ಔಟ್‍ನ ಮನೆ ಹಾಗೂ ಕಚೇರಿಗಳಲ್ಲಿ ತಪಾಸಣೆ ನಡೆಸಿರುವ ಎಸಿಬಿ ಅಧಿಕಾರಿಗಳು ಹಣ ಹಾಗೂ ಕೆಲ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಸಂಜೆ 4 ಗಂಟೆಯವರೆಗೂ ಪರಿಶೀಲನಾ ಕಾರ್ಯಾಚರಣೆ ಮುಂದುವರೆಲಿದೆ., ಅಕ್ರಮ ಸಂಪತ್ತುಗಳ ಬಗ್ಗೆ ಸಂಜೆ ವೇಳೆಗೆ ನಿಖರ ಮಾಹಿತಿ ನೀಡುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!