ಎರಡು ರಾಜ್ಯದಲ್ಲಿ ಪ್ರತ್ಯೇಕ ವಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 14 ಮಂದಿ ದುರಂತ ಸಾವು ಕಂಡಿದ್ದಾರೆ. ಈ ಎರಡೂ ಪ್ರಕರಣದಲ್ಲಿ ಒಟ್ಟು 14 ಮಂದಿ ಭೀಕರ ವಾಗಿ ಗಾಯಗೊಂಡಿದ್ದಾರೆ.
ಒಡಿಶಾ ಹಾಗೂ ತಮಿಳುನಾಡು ರಾಜ್ಯ
ದಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿವೆ.
9 ಮಂದಿ ಸಾವು – 11 ಮಂದಿಗೆ ಗಾಯ:
ಕಳೆದ ರಾತ್ರಿ ಸಂಭವಿಸಿದ ಈ ಘಟನೆಯಲ್ಲಿ ಓಡಿಶಾ ಜೇಫೊರೊ ಮುರ್ತಹಂಡಿ ಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಪಿಕ್ ಅಪ್ ವ್ಯಾನ್ ರಸ್ತೆ ಬದಿತ ಮರಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲೇ 9 ಮಂದಿ ಸಾವನ್ನಪ್ಪಿದರು. 11 ಮಂದಿ ಭೀಕರ ವಾಗಿ ಗಾಯಗೊಂಡರು. ಚಾಲಕ ನಾಪತ್ತೆ ಯಾಗಿದ್ದಾನೆ.
ಈ ಪಿಕ್ ಅಪ್ ವಾಹನದಲ್ಲಿ ಒಟ್ಟು 35 ಮಂದಿ ಪ್ರಯಾಣ ಮಾಡುತ್ತಿದ್ದರಂತೆ. ಉಳಿದವರ ಬಗ್ಗೆ ಮಾಹಿತಿ ಬರಬೇಕಿದೆ.
ನಿಂತಿದ್ದ ಬಸ್ಸಿಗೆ ಓಮ್ನಿ ಕಾರು ಹಿಂದಿನಿಂದ ಢಿಕ್ಕಿ : 5 ಮಂದಿ ಸಾವು
ಮೂವರ ಸ್ಥಿತಿ ಗಂಭೀರ
ಪ್ರಯಾಣಿಕರನ್ನು ಇಳಿಸುತ್ತಿದ್ದ ಸರ್ಕಾರಿ ಬಸ್ ಗೆ ಹಿಂದಿನಂದವ ಓಮ್ನಿ ಕಾರು ಢಿಕ್ಕಿ ಹೊಡೆದ ಪರಿಣಾಮ 5 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ.
ಈ ಘಟನೆ ತಮಿಳುನಾಡಿನ ಈರೋಡ್ ಕಾವೇರಿಪಟ್ಟಣಂ ಬಳಿ ನಡೆದಿದೆ.
ಕಾರಿನಲ್ಲಿದ್ದ ಪ್ರಶಾಂತ್, ಲಿಂಗಾ, ಸುಂದರೇಶ್, ಶಿವಕುಮಾರ್ ಹಾಗೂ ಬಸ್ಸಿನ ಪ್ರಯಾಣಿಕ ದೇವರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದ ಗೌತಮ್, ಭರಣಿ ಹಾಗೂ ಅಶೋಕ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.