ಹಿರಿಯ ಐಪಿಎಸ್ ಅಧಿಕಾರಿ ಡಾ. ಆರ್.ಪಿ ಶರ್ಮಾ ಇನ್ನಿಲ್ಲ

Team Newsnap
1 Min Read

ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಆರ್.ಪಿ ಶರ್ಮಾ (60) ಬುಧವಾರ ನಿಧನರಾದರು.

1987ನೇ ಬ್ಯಾಚ್​ನ ಅಧಿಕಾರಿಯಾಗಿದ್ದ ಶರ್ಮ ಸದ್ಯ ಪೊಲೀಸ್ ಹೌಸಿಂಗ್ ಬೋರ್ಡ್ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಕೂಡ ಇವರ ಹೆಸರು ಕೇಳಿ ಬಂದಿತ್ತು ಎನ್ನಲಾಗಿದೆ.

ಆರ್.ಪಿ ಶರ್ಮಾ ಈ ಹಿಂದೆ ಸೆಪ್ಟೆಂಬರ್ 2ರಂದು ಗನ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ಗಾಯಗೊಂಡಿದ್ದರು.

ಈ ಘಟನೆ ಬಳಿಕ ಶರ್ಮ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಬಳಿಕ ವಾಪಾಸಾಗಿದ್ದರು. ಕ್ಯಾನ್ಸರ್​ನಿಂದ ಬಳುತ್ತಿದ್ದವರು ಇತ್ತೀಚೆಗೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿ ಆಗಲಿಲ್ಲ‌. ಬಹು ಅಂಗಾಂಗ ಕೂಡ ವೈಫಲ್ಯದ ಹಿನ್ನಲೆಯಲ್ಲಿ ಡಾ. ಶರ್ಮ ನಿಧನರಾದರು.

Share This Article
Leave a comment