January 8, 2025

Newsnap Kannada

The World at your finger tips!

BJP , Congress , MLC

ಸಚಿವ ಆಕಾಂಕ್ಷೆಯಾಗಿದ್ದ ಎಚ್ . ವಿಶ್ವನಾಥ್ ಆಸೆಗೆ ಸುಪ್ರೀಂ ಬಿಗ್ ಶಾಕ್

Spread the love

ಸಚಿವನಾಗಬೇಕೆಂದು ಮಹತ್ವಾಕಾಂಕ್ಷೆ ಹೊಂದಿದ್ದ ವಿಧಾನ‌ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಗೆ ಗುರುವಾರ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದೆ.

ನಾಮ ನಿರ್ದೇಶನದ ಮೂಲಕ ಶಾಸಕ ನಾಗಿರುವ ತಾವು ಸಚಿವನಾಗಬೇಕೆಂಬ ವಿಶ್ವನಾಥ್ ಮನವಿಯನ್ನು ತಳ್ಳಿ ಹಾಕಿದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರು ತಮ್ಮ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಪಕ್ಷ ಸೇರಿದರು. ಈ ವೇಳೆ, ಅನೇಕರು ನೇರವಾಗಿ ಆಯ್ಕೆಯಾದರು. ಕೆಲವರು ವಿಧಾನ ಸಭಾ ಸದಸ್ಯ ರಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದರು. ವಿಶ್ವನಾಥ್ ಅವರನ್ನು ಮಾತ್ರ ಸಾಹಿತಿಗಳ ಕೋಟಾದಲ್ಲಿ ನೇಮಕ ಮಾಡಲಾಗಿದೆ. ಹೀಗಾಗಿ ಸಚಿವರಾಗಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಜನರಿಂದ ನೇರವಾಗಿ ಶಾಸಕರಾದರೆ ಮಾತ್ರ ಸಚಿವರಾಗಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ವಿಶ್ವನಾಥ್ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು.

ಹೈಕೋರ್ಟ್ ಕೂಡ ಸುಪ್ರೀಂ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು.
ವಿಶ್ವನಾಥ್ ಅವರು ಮತ್ತೆ ಹೈಕೋರ್ಟ್ ನ ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ವಿಶ್ವನಾಥ್ ಸಲ್ಲಿಸಿದ್ದ ಮನವಿಯ ಬಗ್ಗೆ ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ.ಎಸ್. ಬೋಬ್ಡೆ ಅವರಿದ್ದ ವಿಭಾಗೀಯ ಪೀಠ ಗುರುವಾರ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

ಪಕ್ಷಾಂತರ ಮಾಡಿದವರು ನೇರವಾಗಿ ಆಯ್ಕೆಯಾಗದೆ ನಾಮ ನಿರ್ದೇಶನದ ಮೂಲಕ ನೇಮಕಗೊಂಡು ಮಂತ್ರಿ ಆಗಬಾರದು ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ.
ಇದರಿಂದ ಸಚಿವರಾಗಬೇಕು ಎಂಬ ಮಹತ್ವಾಕಾಂಕ್ಷೆಗೆ ತೀವ್ರವಾದ ನಿರಾಸೆ ಎದುರಾದಂತಾಗಿದೆ.

Copyright © All rights reserved Newsnap | Newsever by AF themes.
error: Content is protected !!