ಪರಿಷತ್ ಚುನಾವಣೆ: ಜೆಡಿಎಸ್ – ಬಿಜೆಪಿ ಮೈತ್ರಿ:ಹೊರಟ್ಟಿ ಸಭಾಪತಿ,ಪ್ರಾಣೇಶ್ ಉಪ ಸಭಾಪತಿ

Team Newsnap
1 Min Read
Basavaraj horatti victory in Western Teachers field

ನಾಳೆ ನಡೆಯುವ ಪರಿಷತ್ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿಯಿಂದಾಗಿ ಸಭಾಪತಿ – ಉಪಸಭಾಪತಿ ಆಯ್ಕೆ ಸುಸೂತ್ರವಾಗಿದೆ. ಹೀಗಾಗಿ ಎರಡೂ ಪಕ್ಷಗಳು ಕೊಟ್ಟು ತೆಗೆದುಕೊಳ್ಳುವ ಸೂತ್ರಕ್ಕೆ ಬದ್ಧವಾಗಿವೆ.

ಮೇಲ್ಮನೆಯಲ್ಲಿ ಬಿಜೆಪಿಗೆ ಜೆಡಿಎಸ್​ ಅನಿವಾರ್ಯ ಎನ್ನುವಂತಾಗಿದೆ. ಈ ಕಾರಣಕ್ಕಾಗಿ ಬಿಜೆಪಿ ಕೊನೆಗೂ ಜೆಡಿಎಸ್​ಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟಿದೆ.

ಬಸವರಾಜ ಹೊರಟ್ಟಿ‌ ಸಭಾಪತಿ:

ಬಿಜೆಪಿ ಬೆಂಬಲದೊಂದಿಗೆ ಸಭಾಪತಿ ಸ್ಥಾನ ಅಲಂಕರಿಸಲು ಜೆಡಿಎಸ್​ನ ಬಸವರಾಜ್ ಹೊರಟ್ಟಿ ಸಿದ್ಧತೆ ನಡೆಸಿದ್ದಾರೆ.

ಉಪಸಭಾಪತಿ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ. ಬಿಜೆಪಿಯ ಅಭ್ಯರ್ಥಿ ಪ್ರಾಣೇಶ್ ಕಣಕ್ಕಿಳಿಯಲಿದ್ದಾರೆ.

pranesh

ಈಗಾಗಲೇ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಪದಚ್ಯುತಿಗೆ ಬಿಜೆಪಿ ನೋಟಿಸ್ ಕೊಟ್ಟಿದೆ. ಬಹುಮತ ಇಲ್ಲದ ಕಾರಣ ಬಿಜೆಪಿಗೆ ಜೆಡಿಎಸ್‌ ಅನಿವಾರ್ಯ ವಾಗಿದೆ.

ಬಿಜೆಪಿಯಿಂದ ಉಪ-ಸಭಾಪತಿ ಸ್ಥಾನಕ್ಕೆ ಎಂ.ಕೆ.ಪ್ರಾಣೇಶ್ ಆಯ್ಕೆಯಾಗಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ  ಉಪ ಸಭಾಪತಿ ಸ್ಥಾನಕ್ಕೆ ವಿಧಾನಸೌಧದಲ್ಲಿ ಎಂ.ಕೆ. ಪ್ರಾಣೇಶ್ ನಾಮಪತ್ರ ಸಲ್ಲಿಸಲಿದ್ದಾರೆ.

Share This Article
Leave a comment