February 22, 2026

Newsnap Kannada

The World at your finger tips!

gani

ಕೆ ಆರ್ ಎಸ್ ಅಣೆಕಟ್ಟು ಭದ್ರತೆ: ಬೇಬಿ ಬೆಟ್ಟದ ಸುತ್ತಮುತ್ತ ಗಣಿ ಸಂಪೂರ್ಣ ನಿಷೇಧ – ಮಂಡ್ಯ ಜಿಲ್ಲಾಡಳಿತ

Spread the love

ಶಿವಮೊಗ್ಗ ಸ್ಫೋಟದ ಬಳಿಕ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಗೆ ಇಂದಿನಿಂದ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದೆ.

ಕೈಕುಳಿ ಸೇರಿದಂತೆ ಎಲ್ಲಾ ರೀತಿಯ ಕಲ್ಲು ಗಣಿಗಾರಿಕೆ ನಿಷೇಧಿಸಿದ ಜಿಲ್ಲಾಡಳಿತ
ಕೆ ಆರ್ ಎಸ್ ಅಣೆಕಟ್ಟಿನ ಸುರಕ್ಷತೆ ಕಾರಣಕ್ಕಾಗಿ ಆ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಗಣಿಗಾರಿಗಳನ್ನು ಸ್ಥಗಿತಗೊಳಿಸುವ ತೀರ್ಮಾನ ಮಾಡಲಾಗಿದೆ.

ಈ ಹಿಂದೆ ಕ್ವಾರಿಗಳಿಂದ ಕಲ್ಲು ತೆಗೆಯುವುದನ್ನು ಮಾತ್ರ ನಿಷೇಧಿಸಲಾಗಿತ್ತು. ಹೊರಗಿನಿಂದ ಕಲ್ಲು ತಂದು ಕ್ರಷರ್ (ಕಲ್ಲುಪುಡಿ) ಘಟಕ ನಡೆಸಲು ಅವಕಾಶ ನೀಡಲಾಗಿತ್ತು ಆದರೆ ಈಗ ಬೇಬಿ ಬೆಟ್ಟದಲ್ಲೇ ರಾತ್ರಿ ವೇಳೆ ಗಣಿ ಮಾಲೀಕರು ಬಂಡೆ ಬ್ಲಾಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಈ ಹಿಂದೆ ಪ್ರಭಾವಿ ಗಣಿ ಮಾಲೀಕರಿಗೆ ಎಷ್ಟೇ ಎಚ್ಚರಿಕೆ ಕೊಟ್ಟರೂ ರಾತ್ರಿ ನಿರಂತರ ಬ್ಲಾಸ್ಟಿಂಗ್ ನಡೆಸುತ್ತಿದ್ದಾರೆ. ಹೀಗಾಗಿ ಆ ಪ್ರದೇಶದ ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಡ್ರೋಣ್ ಮೂಲಕ ಗಣಿ ಚಟುವಟಿಕೆ ಮೇಲೆ ನಿಗಾ:

ಬೇಬಿ ಬೆಟ್ಟದ ಸುತ್ತ ಮುತ್ತಲಿನಲ್ಲಿ ಕದ್ದುಮುಚ್ಚಿ ಗಣಿಗಾರಿಕೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಡ್ರೋಣ್ ಕ್ಯಾಮರಾ ಮೂಲಕ ಗಣಿ ಚಟುವಟಿಕೆಗಳನ್ನು ನಿಗಾ ಇಡಲೂ ಕೂಡ ಜಿಲ್ಲಾಡಳಿತ ನಿರ್ಧರಿಸಿದೆ.

error: Content is protected !!