ಲಂಚ ಕೇಳಿದ ಸಚಿವ ಅಶೋಕ್ ಪಿಎ: ದೂರು ದಾಖಲು

Team Newsnap
1 Min Read

ಕಂದಾಯ ಸಚಿವ ಆರ್. ಅಶೋಕ ಪಿಎ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಬ್ ರಿಜಿಸ್ಟ್ರಾರ್ ಬಳಿ ಲಂಚ ಕೇಳಿದ ಪಿಎ ವಿರುದ್ಧ ದೂರು ನೀಡಲಾಗಿದೆ.

ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಅಶೋಕ ಪಿಎ ಗಂಗಾಧರ್ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ದೂರನ್ನು ಸಲ್ಲಿಸಿದ್ದಾರೆ.

ದೂರಿನಲ್ಲಿ ಚೆಲುವರಾಜ್ ಜನವರಿ 24ರಂದು ಚಿಕ್ಕಮಗಳೂರು ಪ್ರವಾಸವನ್ನು ಸಚಿವ ಆರ್. ಅಶೋಕ ಕೈಗೊಂಡಿದ್ದರು. ಈ ವೇಳೆ ಅಶೋಕ್ ಪಿಎ ಗಂಗಾಧರ್ ಹಣ ಕೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಸಚಿವರ ಪಿಎ ವಿರುದ್ಧ ದೂರು ನೀಡಿರುವ ಕಾರಣ ತನಗೆ ಸಹ ಸೂಕ್ತ ರಕ್ಷಣೆ ನೀಡಬೇಕು ಎಂದು ಚೆಲುವರಾಜ್ ದೂರಿನಲ್ಲಿ ಮನವಿ ಮಾಡಿದ್ದಾರೆ. ಸಚಿವರ ಪಿಎ ವಿರುದ್ಧ ಕೇಳಿ ಬಂದಿರುವ ಲಂಚದ ಆರೋಪ ಪ್ರತಿಪಕ್ಷಗಳಿಗೆ ಅಸ್ತ್ರವಾಗುವ ನಿರೀಕ್ಷೆ ಇದ್ದು, ಜನವರಿ 28ರಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ.

ಕಂದಾಯ ಸಚಿವ ಆರ್. ಅಶೋಕ ಶೃಂಗೇರಿಗೆ ಭೇಟಿ ನೀಡಿದಾಗ ಚೆಲುವರಾಜ್ ಅವರನ್ನು ಭೇಟಿಯಾಗಲು ಹೋಗಿದ್ದರು. ಆಗ ಗಂಗಾಧರ್ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಲಂಚ ಕೇಳಿದ್ದಾರೆ ಎಂದು ಚೆಲುವರಾಜ್ ಆರೋಪಿಸಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಂಗಾಧರ್ ಸಚಿವ ಅಶೋಕ್ ಅವರ ಪಿಎ ನಾ? ಅಥವ ಬೇರೆ ವ್ಯಕ್ತಿಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಸಚಿವರು ಸಹ ಈ ಘಟನೆ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Share This Article
Leave a comment