ಕೆಪಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 14 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 35 ಲಕ್ಷ ರು ಹಣ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಈ ಪ್ರಕರಣದ ಮಾಹಿತಿ ನೀಡಿ ಕಿಂಗ್ ಪಿನ್ ಚಂದ್ರು ಬಂಧನದ ನಂತರ ಒಟ್ಟು 14 ಜನರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 35 ಲಕ್ಷ ನಗದು ಹಣ 1 ಎರ್ಟಿಗಾ, 1 ಬೊಲೆರೋ ಕಾರನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ತನಿಖೆಗೆ ವಿಶೇಷ ತಂಡವನ್ನೂ ರಚನೆ ಮಾಡಲಾಗಿದೆ ಎಂದರು.
ಕಿಂಗ್ ಪಿನ್ ಅರೆಸ್ಟ್ ಮಾಡಿದ್ದೇ ಒಂದು ರೋಚಕ ಕಥೆ:
ಸಿಸಿಬಿ ಪೊಲೀಸರು ಕಿಂಗ್ ಪಿನ್ ಚಂದ್ರು ಹೇಗೆ ಖೆಡ್ಡಾಕ್ಕೆ ಕೆಡವಿದ್ರು ಎಂಬುದೇ ರೋಚಕ ಕಥೆ. ಮೊದಲಿಗೆ ಆರೋಪಿಗಳ ಬಗ್ಗೆ ಸುಳಿವು ಪಡೆದಿದ್ದ ಸಿಸಿಬಿ ಪೊಲೀಸರ ತಂಡ, ಉಳ್ಳಾಲದ ಅಪಾರ್ಟ್ಮೆಂಟ್ ಬಳಿ ಬಂತು. ಆದರೆ ನಾಲ್ಕು ಮಹಡಿಯ ಅಪಾರ್ಟ್ಮೆಂಟ್ನಲ್ಲಿ ಆರೋಪಿಗಳು ಯಾವ ಫ್ಲ್ಯಾಟ್ನಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದಿರಲಿಲ್ಲ ಎಂದರು.
ಎರಡನೇ ಪ್ಲೋರ್ ನ ಮನೆಯೇಚಂದ್ರುಗೆ ಸೇರಿದ್ದು:
ಅಪಾರ್ಟ್ಮೆಂಟನ್ನು ಸಿಸಿಬಿ ಪೊಲೀಸರು ನಿರಂತರವಾಗಿ ವಾಚ್ ಮಾಡಲು ಶುರುಮಾಡಿದರು. ಆಗ ಪೆಂಟ್ಹೌಸ್ ಹಾಗೂ ಎರಡನೇ ಫ್ಲೋರ್ನ ಅದೊಂದು ಮನೆಯ ಮೇಲೆ ಸಿಸಿಬಿ ಅಧಿಕಾರಿಗಳಿಗೆ ಅನುಮಾನ ಶುರು ಆಯಿತು. ಅಪಾರ್ಟ್ಮೆಂಟ್ನ ಎಲ್ಲಾ ಮನೆಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಒಂದು ಮನೆ ಬಿಟ್ಟು ಎಲ್ಲಾ ಮನೆಗಳ ಡೋರ್ ಓಪನ್ ಆಯಿತು.
ಎರಡನೇ ಫ್ಲೋರ್ನ ಆ ಮನೆ ಸಂಪೂರ್ಣವಾಗಿ ಕರ್ಟನ್ ನಿಂದ ಕವರ್ ಆಗಿತ್ತು. ಈ ಎಲ್ಲಾ ಕಾರಣದಿಂದ ಆ ಮನೆ ಮೇಲೆ ಸಿಸಿಬಿಗೆ ಅನುಮಾನ ಬಂತು. ಆದರೆ ಆರೋಪಿ ಚಂದ್ರು ಅಲ್ಲಿ ಪತ್ತೆಯಾಗಿರಲಿಲ್ಲ. ಹೀಗಾಗಿ ಪೊಲೀಸರು ಮತ್ತೆ ಹೊರಗೆ ಬಂದು ಕಾದು ಕುಳಿತರು.
ಎಂದು ಪಾಟೀಲ್ ವಿವರಿಸಿದರು.
ಹೊರಗೆ ಹೋಗಿದ್ದ ಆರೋಪಿ ಚಂದ್ರು ಅದೇ ಮನೆ ಒಳಗೆ ಹೋದ. ಆರೋಪಿ ಹೊಗುವುದನ್ನೇ ಕಾದು, ನಂತರ ಅಲ್ಲಿಗೆ ತೆರಳಿದ ಪೊಲೀಸರು ಮನೆ ಬಾಗಿಲು ತಟ್ಟಿ ಒಳಗೆ ಹೋಗಿ ತಲಾಷ್ ಶುರು ಮಾಡಿದರು ಎಂದು ಪಾಟೀಲ್ ಸಮಗ್ರ ಮಾಹಿತಿ ನೀಡಿದರು.
ತಾಯಿ ಮನೆಯಲ್ಲಿ ಇಲ್ಲ ಅಂದ್ರು:
ಆರೋಪಿ ಚಂದ್ರು ಮನೆಗೆ ಸಿಸಿಬಿ ಪೊಲೀಸರು ಪ್ರವೇಶ ಮಾಡಿದ್ದರಲ್ಲೂ ಒಂದು ರೋಚಕತೆ ಇದೆ. ಆರೋಪಿ ಆ ಮನೆಯಲ್ಲಿ ತನ್ನ ಪೋಷಕರ ಜೊತೆಯಲ್ಲಿದ್ದ. ಮನೆಯ ಮುಂದೆ ಕಾದು ಕುಳಿತಿದ್ದ ತಂಡ ಆರೋಪಿಯ ಚಲನವಲನಗಳನ್ನು ಗಮನಿಸಿತು. ಚಂದ್ರು ಮನೆಗೆ ತೆರಳಿದ ನಂತರ ಆ ಮನೆಗೆ ಬಂದ ಸಿಸಿಬಿ ತಂಡ, ತಾವು ಪೊಲೀಸರು ಅಂತ ಪೊಷಕರಿಗೆ ತಿಳಿಸಿರಲಿಲ್ಲ. ಬದಲಾಗಿ ನಿಮ್ಮ ಮಗ ನಮ್ಮ ಕಾರಿಗೆ ಅಪಘಾತ ಮಾಡಿದ್ದಾನೆ ಎಂಬ ಕಾರಣ ಹೇಳಿಕೊಂಡು ಮನೆ ಪ್ರವೇಶಿಸಿತ್ತು.
ಆಗ ಚಂದ್ರು ತಾಯಿ, ನಾನೇ ಹಣ ಕೊಡ್ತೀನಿ ಸಾರ್ ನನ್ನ ಮಗ ಮನೆಯಲ್ಲಿ ಇಲ್ಲ ಎಂದಿದ್ದರು. ಆದರೆ ರೂಂ ನಲ್ಲಿದ್ದ ಆರೋಪಿಯನ್ನು ತಂಡ ಲಾಕ್ ಮಾಡಿತು. ಈ ವೇಳೆ ತಾಯಿಗೂ ಈ ಬಗ್ಗೆ ಅರಿವಾಗಿ ಪ್ರಶ್ನೆ ಪತ್ರಿಕೆ ತಗೊಂಡು ಹೋಗಬೇಡಿ ಎಂದು ಅಂಗಲಾಚಿದರು ಎಂದು ಹೇಳಿದರು.
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
- ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
- ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ
More Stories
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ