March 12, 2026

Newsnap Kannada

The World at your finger tips!

madhuswamy

ಮತ್ತೆ ಸಣ್ಣ ನೀರಾವರಿ ‌ ಖಾತೆ ಮಾಧುಸ್ವಾಮಿ ಮಡಿಲಿಗೆ

Spread the love

ಖಾತೆಯ ಕ್ಯಾತೆ ಮುಗಿಯುತ್ತಿಲ್ಲ .‌ ಸಚಿವ ಮಾಧುಸ್ವಾಮಿಗೆ ಪ್ರವಾಸೋದ್ಯಮ ಖಾತೆ ನೀಡಿದ್ದರಿಂದ ಮುನಿಸಿಕೊಂಡು ರಾಜೀನಾಮೆಗೆ ಮುಂದಾಗಿದ್ದರು.

ಈ ಮುನಿಸು ಉಪಶಮನ ಮಾಡಲು ಸಿಎಂ ಯಡಿಯೂರಪ್ಪ ಮತ್ತೆ ಸಣ್ಣ ನೀರಾವರಿ ಖಾತೆಯನ್ನು ಮಾಧುಸ್ವಾಮಿ ಅವರಿಗೆ ಹಿಂತಿರುಗಿಸಿ, ಅವರ ಬಳಿ ಇದ್ದ ಪ್ರವಾಸೋದ್ಯಮ ಖಾತೆಯನ್ನು ಸಿ ಪಿ ಯೋಗೇಶ್ವರ್ ಗೆ ನೀಡಿದ್ದಾರೆ.

ಪ್ರವಾಸೋದ್ಯಮದ ಜೊತೆಗೆ ಜೀವಶಾಸ್ತ್ರ, ಪರಿಸರ ಖಾತೆಗಳನ್ನು ಕೂಡ ಯೋಗೇಶ್ವರ್ ಅವರಿಗೆ ನೀಡಲಾಗಿದೆ.

ಈ ಬದಲಾವಣೆಯಿಂದ ನಾಲ್ಕನೇ ಬಾರಿ ಖಾತೆಗಳ ಅದಲು ಬದಲು ಮಾಡಿದಂತಾಗಿದೆ. ಇಷ್ಟೆಲ್ಲಾ ಮಾಡಿದರೂ ಸಹ ಸಚಿವ ಆನಂದ್ ಸಿಂಗ್ ಕೂಡ ಮುನಿಸಿಕೊಂಡಿದ್ದಾರೆ. ಅವರನ್ನು ಸಮಾಧಾನ ಮಾಡುವ ಪ್ರಯತ್ನ ಗಳು ಮುಂದುವರೆದಿವೆ.

error: Content is protected !!