ಮಹಿಳಾ ದಿನಾಚರಣೆ ದಿನವೇ ಮಹಿಳೆಯರಿಗಾಗಿ ಬಾರ್ ಆರಂಭ!

Team Newsnap
1 Min Read

ಬಹುತೇಕ ನಗರವಾಸಿ ಮಹಿಳೆಯರು ಕಿಟ್ಟಿ‌ ಪಾರ್ಟಿ ಮಾಡಿ ಅಲ್ಲಿ ಮೋಜು, ಮಸ್ತಿ ಮಾಡಿ ಖುಷಿಯಾಗಿ ಇರುತ್ತಾರೆ. ಕೆಲವು ಮಹಿಳೆಯರು, ಹುಡುಗಿಯರು ಮದ್ಯ ಸೇವನೆ ಮಾಡುವುದು, ಬಾರ್ ಮತ್ತು ಪಬ್ ಗೆ ಹೋಗುವುದೂ ಕೂಡ ತೀರಾ ಕಾಮನ್ ಆಗಿದೆ

ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರಿಗಾಗಿಯೇ ಬೆಂಗಳೂರಿನಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭವಾಗಲಿದೆ.

ಈ ಬಾರ್ ನಲ್ಲಿ ಎಲ್ಲಾ ಸೇವೆಯನ್ನು ಮಹಿಳೆಯರೇ ನಡೆಸಿಕೊಳ್ಳುತ್ತಾರೆ. ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿ ಮಿಸ್‌ ಆ್ಯಂಡ್‌ ಮಿಸೆಸ್‌ ರೆಸ್ಟೋರೆಂಟ್‌ ಮತ್ತು ಲಾಂಜ್‌ ಬಾರ್ ಎಂದು ನಾಮಕರಣ ಮಾಡಲಾಗಿದೆ. 2021ರ ಮಾರ್ಚ್ 8 ಮಹಿಳಾ ದಿನಾಚರಣೆ ದಿನವೇ ಈ ಮಹಿಳಾ ಬಾರ್ ಲೋಕಾರ್ಪಣೆ ಆಗಲಿದೆ.

ಇಲ್ಲಿ ಮಹಿಳೆಯರಿಗೆ ಬೇಕಾದ ಕೆಲ ಸೇವೆಗಳು, ಒಳ್ಳೆಯ ಊಟ, ಮದ್ಯ ಮತ್ತು ಪೆಡಿಕ್ಯೂರ್ ಈ ರೀತಿಯ ಕೆಲ ಸೇವೆಗಳು ದೊರಕಲಿದೆ. ಎಲ್ಲಾ ಸೇವೆಗಳನ್ನು ಮಹಿಳೆಯರೇ ನಿಭಾಯಿಸಲಿದ್ದಾರೆ.

ಈ ಬಾರ್ ಅಂಡ್ ರೆಸ್ಟೋರೆಂಟ್ ನ ಸಂಸ್ಥಾಪಕಿ ಆದಿಯಾಗಿ ಪ್ರತಿಯೊಂದು ಕೆಲಸವನ್ನು ಮಹಿಳೆಯರೇ ಮಾಡುತ್ತಾರಂತೆ. ಈ ರೆಸ್ಟೋರೆಂಟಿಗೆ ಪುರುಷರಿಗೆ ಪ್ರವೇಶವೇ ಇಲ್ಲ ಎಂದು ರೆಸ್ಟೋರೆಂಟ್ ಮುಖ್ಯಸ್ಥೆ,
ಸಂಸ್ಥಾಪಕಿ ಪಂಜೂರಿ ವಿ. ಶಂಕರ್ ಮಾಧ್ಯಮ ಗಳಿಗೆ ವಿವರಣೆ ನೀಡಿದ್ದಾರೆ.

ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಪುರುಷರ ಜತೆ ಕೆಲ ಮಹಿಳೆಯರು ಹೋಗಲು ಮುಜುಗರ ಪಡುತ್ತಾರೆ ಮತ್ತು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಕೂಡ. ಹಾಗಾಗಿ ಈ ರೀತಿಯ ಸೇವೆಯನ್ನು ಆರಂಭಿಸಿದ್ದೇವೆ, ಈ ನಮ್ಮ ರೆಸ್ಟೋರೆಂಟ್ ಪ್ರತಿದಿನವೂ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 1 ಗಂಟೆವರೆಗೆ ತೆರೆದಿರುತ್ತದೆ.

Share This Article
Leave a comment