November 25, 2024

Newsnap Kannada

The World at your finger tips!

b m hegde

ಎಸ್ಪಿ ಬಿ‌, ಡಾ. ಬಿ. ಎಂ‌‌. ಹೆಗ್ಡೆ ಸೇರಿ ಹಲವು ಗಣ್ಯರಿಗೆ ಪದ್ಮವಿಭೂಷಣ

Spread the love

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ವೇಳೆ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ಘೋಷಣೆ ಮಾಡಿದೆ.

ಪದ್ಮ ವಿಭೂಷಣ :

ಜಪಾನ್​ನ ಶಿಂಜೊ ಅಬೆ (ಸಾರ್ವಜನಿಕ ಕ್ಷೇತ್ರ), ಎಸ್.ಪಿ. ಬಾಲಸುಬ್ರಹ್ಮಣ್ಯಂ (ಕಲೆ), ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ಬಿ.ಎಂ. ಹೆಗ್ಡೆ ವೈದ್ಯಕೀಯ ಕ್ಷೇತ್ರ), ಮೌಲಾನಾ ವಹಿದುದೀನ್ ಖಾನ್ (ಆಧ್ಯಾತ್ಮ ವಿಭಾಗ), ಬಿ.ಬಿ. ಲಾಲ್ (ಪುರಾತತ್ವ ಶಾಸ್ತ್ರ ವಿಭಾಗ) ಹಾಗೂ ಒಡಿಶಾದ ಸುದರ್ಶನ್ ಸಾಹೊ (ಕಲೆ) ಅವರಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಿದೆ.

ಪದ್ಮ ಭೂಷಣ:

10 ಸಾಧಕರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ರಾಮ್‌ವಿಲಾಸ್‌ ಪಾಸ್ವಾನ್, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್‌ಗೆ ಪದ್ಮಭೂಷಣ

ಪದ್ಮಶ್ರೀ :

ದೇಶದ 102 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.

ಕರ್ನಾಟಕದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆರ್.ಲಕ್ಷ್ಮೀನಾರಾಯಣ ಕಶ್ಯಪ್‌ (ಶಿಕ್ಷಣ), ಬಿ.ಮಂಜಮ್ಮ ಜೋಗತಿ (ಕಲೆ), ಕೆ.ವೈ.ವೆಂಕಟೇಶ್ (ಕ್ರೀಡೆ) ಕ್ಷೇತ್ರದಿಂದ ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ.

ಪೊಲೀಸ್ ಮೆಡಲ್

ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್ ಸರ್ವೀಸ್​ಗೆ ಕರ್ನಾಟಕದಿಂದ 19 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ.

IGP ಡಾ. ಸುಬ್ರಮಣ್ಯೇಶ್ವರ ರಾವ್ ಅಯ್ಯಂಕಿ, SP ಬಾಬಾಸಾಬ್ ಶಿವಗೌಡ ನೆಮಗೌಡ್, DYSPಗಳಾದ ಬಸವಣ್ಣಪ್ಪ ರಾಮಚಂದ್ರ, ಅಶೋಕ ಡಿ, ಸಿ. ಬಾಲಕೃಷ್ಣ, ವಾಸುದೇವ್ ವಿ.ಕೆ., CI ಬಾಲಚಂದ್ರ ನಾಯ್ಕ್, ACIಗಳಾದ ಹೊನ್ನಗಂಗಯ್ಯ ಈಶ್ವರಯ್ಯ, ಪ್ರಕಾಶ್, ಪೊಲೀಸ್ ಅಧಿಕಾರಿ ಬಸವಯ್ಯ ಪುಟ್ಟಸ್ವಾಮಿ, ರಿಸರ್ವ್ SIಗಳಾದ ವೆಂಕಟೇಶ್, ಮೋಹನ್​ರಾಜು ಕುರುಡಗಿ, ವೆಂಕಟಸ್ವಾಮಿ ಚಿನ್ನಪ್ಪ, ಜೀತೇಂದ್ರ ಕುಡುಕಾಡಿ ರಾಧಾಕೃಷ್ಣ ರೈ, ಶಶಿಕಕುಮಾರ್, ಸಶಸ್ತ್ರ ಪಡೆಯ ಮುಖ್ಯ ಪೇದೆ ರಾಮಚಂದ್ರ ಲೋಕೇಶ್, ಮುಖ್ಯ ಪೇದೆ ಶ್ರೀ ಉಸ್ಮಾನ್ ಸಾಬ್, ಸತೀಶ್ ಕೆಂಪಯ್ಯ ವೆಂಕಟಪ್ಪ ಹಾಗೂ ಪ್ರಕಾಶ್ ಶೆಟ್ಟಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸ್ ಮೆಡಲ್ ಪಡೆಯಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!