March 14, 2026

Newsnap Kannada

The World at your finger tips!

raging

ಮೀಸೆ, ತಲೆ ಕೂದಲು ಬೋಳಿಸಲು ಆದೇಶ: ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡಿದ್ದ 9 ಮಂದಿ ಬಂಧನ

Spread the love

ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗೆ ರಾಗಿಂಗ್ ಮಾಡಿದ ಆರೋಪದಡಿಯಲ್ಲಿ ಮಂಗಳೂರಿನ ಖಾಸಗಿ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿಗಳನ್ನು ಜಿಷ್ಣು (20), ಶ್ರೀಕಾಂತ್ (20), ಅಶ್ವಥ್ (20), ಸಾಯಿನಾಥ್ (22), ಅಭಿರತ್ ರಾಜೀವ್ (21), ರಾಹುಲ್ (21), ಜಿಷ್ಣು(20), ಮುಕ್ತಾರ್ ಅಲಿ (19), ಮಹಮ್ಮದ್ ರಝೀಮ್ (20) ಎಂದು ಗುರುತಿಸಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ. ದೂರು ಸಹ ದಾಖಲಾಗಿತ್ತು.
ರಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಮತ್ತು ಬಂಧಿತರೆಲ್ಲರೂ ಕೇರಳದವರು.‌

ಮೊದಲ ವರ್ಷದ ಬಿ- ಫಾರ್ಮಾ ವಿದ್ಯಾರ್ಥಿಗೆ ತಲೆಕೂದಲು ಮತ್ತು ಮೀಸೆ ತೆಗೆದು ಬರುವಂತೆ ಆರೋಪಿಗಳು ಹೇಳಿದ್ದರು. ಆದರೆ ಹಾಗೆ ಮಾಡದೇ ಇರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ, ಐದಾರು ದಿನಗಳ ಕಾಲ ನಿರಂತರ ರಾಗಿಂಗ್ ಮಾಡಿದ್ದರು

ಈ ಕುರಿತಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ವಿರುದ್ಧ ಐ.ಪಿ.ಸಿ ಮತ್ತು ಕರ್ನಾಟಕ ಎಜುಕೇಶನ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!