ಕೊರೊನಾ ಸಾಂಕ್ರಾಮಿಕದ ಕಾರಣ ಭಾರತದ ಆರ್ಥಿಕತೆ ಮೇಲೆ ಹೊಡೆತ ಬಿದ್ದಿತ್ತು. ಇದೀಗ ವ್ಯಾಪಾರೋದ್ಯಮ ಕ್ರಮೇಣವಾಗಿ ಚೇತರಿಕೆ ಕಾಣುತ್ತಿದೆ.
ಈ ನಿಟ್ಟಿನಲ್ಲಿ ಇತಿಹಾಸಲ್ಲೇ ಮೊದಲ ಬಾರಿಗೆ 50 ಸಾವಿರ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.
ಇಂದು ಬಿಎಸ್ ಇ ಸೆನ್ಸೆಕ್ಸ್ 50,000 ಗಡಿ ದಾಟುವ ಮೂಲಕ ದಾಖಲೆ ನಿರ್ಮಿಸಿದೆ. ಷೇರು ವಹಿವಾಟು ಆರಂಭವಾಗಿ, ಪ್ರೀ ಓಪನಿಂಗ್ ಸೆಷನ್ನಲ್ಲೇ ಸೆನ್ಸೆಕ್ಸ್ 240 ಪಾಯಿಂಟ್ಸ್ ಏರಿಕೆ ಕಂಡು 50 ಸಾವಿರದ ಗಡಿ ದಾಟಿದೆ.
ನಿಫ್ಟಿ ಸೂಚ್ಯಂಕ 124 ಪಾಯಿಂಟ್ಸ್ ಏರಿಕೆ ಕಂಡು 14,700ಕ್ಕಿಂತ ಮೇಲೆ ಜಿಗಿದಿದೆ. ಆರ್ಐಎಲ್, ಇನ್ಫೋಸಿಸ್ ಹಾಗೂ ಟಿಸಿಎಸ್ ಕಂಪನಿಗಳು ಲಾಭ ಗಳಿಸಿದ ಟಾಪ್ ಸಂಸ್ಥೆಗಳಾಗಿವೆ.
ಸಂಭ್ರಮ – ಸಂತಸ :
1) 50 ಸಾವಿರದ ಗಡಿ ದಾಟಿದ ಷೇರು ಸೂಚ್ಯಂಕ
2) ಮುಂಬೈ ಷೇರುಮಾರುಕಟ್ಟೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ
3) ಬೆಳ್ಳಂಬೆಳಗ್ಗೆ ಷೇರುದಾರರಿಗೆ ಶುಭ ಸುದ್ದಿ
4) ಏರುಗತಿಯಲ್ಲಿ ವೇಗವಾಗಿ ವೃದ್ಧಿಕಂಡ ಸೆನ್ಸೆಕ್ಸ್ ಸೂಚ್ಯಂಕ
5) 304.45 ಅಂಕಗಳ ಏರಿಕೆಯೊಂದಿಗೆ ಅರ್ಧಶತಕದ ಗಡಿ ದಾಟಿದ ಸೂಚ್ಯಂಕ
6) ಮೊದಲ ಲಾಕ್ಡೌನ್ ವೇಳೆ ಅರ್ಧಕ್ಕೆ ಅರ್ಧ ಕುಸಿದಿದ್ದ ಸೂಚ್ಯಂಕ
7) ಇತಿಹಾಸದಲ್ಲೇ ಮೊದಲ ಬಾರಿ 50 ಸಾವಿರದ ಗಡಿ ದಾಟಿದ ಸೂಚ್ಯಂಕ
- ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು: ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಜೀವಂತ
- ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
- ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
- ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
- ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
More Stories
ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು: ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಜೀವಂತ
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!