ಕುರುಬ ಸಮುದಾಯ ಸಿದ್ದುಗೆ ಬಹಿಷ್ಕಾರದ ಎಚ್ಚರಿಕೆ: ಎಚ್.ವಿಶ್ವನಾಥ್

Team Newsnap
1 Min Read
Village bird 'Vishwanath' Congress inclusion fix in Uttarayana Punyakala ಉತ್ತರಾಯಣ ಪುಣ್ಯಕಾಲದಲ್ಲಿ ಹಳ್ಳಿ ಹಕ್ಕಿ 'ವಿಶ್ವನಾಥ್' ಕಾಂಗ್ರೆಸ್ ಸೇರ್ಪಡೆ ಫಿಕ್ಸ್

ಕುರುಬ ಸುಮದಾಯವನ್ನು ಎಸ್‌ಟಿ’ಗೆ ಸೇರಿಸುವ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇಡೀ ಸಮುದಾಯಕ್ಕೆ ಅವಮಾನ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಸಮಾಜ ಅವರನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ .

ಬುಧವಾರ ಮೈಸೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಕುರುಬ ಸಮುದಾಯವನ್ನು ಎಸ್‌ಟಿ’ಗೆ ಸೇರಿಸುವಂತೆ ಆಗ್ರಹಿಸಿ ಸ್ವಾಮೀಜಿ ನಡೆಸುವ ಪಾದಯಾತ್ರೆಗೆ ಆರ್‌ಎಸ್‌ಎಸ್ ಫಂಡ್ ನೀಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಇಂತಹ ಆರೋಪದಿಂದ ನನಗೆ ನೋವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಧಾರ್ಮಿಕ ಸಂಘಟನೆ ಯಿಂದಲೇ ಮುಖ್ಯಮಂತ್ರಿಯಾಗಿದ್ದು. ಇವಾಗ ಅದನ್ನು ಮರೆತು, ಮಠನೂ ಗೊತ್ತಿಲ್ಲ, ಸ್ವಾಮೀಜಿನೂ ಗೊತ್ತಿಲ್ಲ ಎಂದು ನಮ್ಮ ಸ್ವಾಮಿಗಳ‌ ಮಾನ ಹರಾಜು ಹಾಕುತ್ತಿದ್ದಾರೆ. ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ. ನಮ್ಮ ಬಗ್ಗೆ ನೀವು ಏನಾದರೂ ಹೇಳಿ, ಆದರೆ ಸ್ವಾಮೀಜಿ ಬಗ್ಗೆ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಮಠ, ಸಮಾಜ ಹಾಗೂ ಸ್ವಾಮಿಗಳ ಬಗ್ಗೆ ಬಹಳ ಲಘುವಾಗಿ ಮಾತನಾಡುವುದು ಶೋಭೆ ತರುವಂತದಲ್ಲ. ಸಿದ್ದರಾಮಯ್ಯ ನೀವು ಜನರನ್ನು ದಿಕ್ಕುತಪ್ಪಿಸಬೇಡಿ. ಸಮುದಾಯದ ಋಣ ನಿಮ್ಮ ಮೇಲಿದೆ. ಸಮಾಜದಿಂದ ನೀವು ಇಷ್ಟೆಲ್ಲ ಆಗಿದ್ದು. ನಿಮ್ಮ ಹೇಳಿಕೆಯನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಕುಲಶಾಸ್ತ್ರ ಅಧ್ಯಯನ ಮಾಡಬೇಕು ಎಂಬ ವಿಚಾರದಲ್ಲಿ ನೀವೊಬ್ಬರೇ ಬುದ್ಧಿವಂತರಲ್ಲ. ಅದು ನಮಗೂ ಗೊತ್ತಿದೆ‌. ನೀನು ಹೋರಾಟಕ್ಕೆ ಬರುವುದಾದರೆ ಬಾ, ಇಲ್ಲ ಬಿಡು. ಈ ರೀತಿ ಸಮುದಾಯದ ದಾರಿ ತಪ್ಪಿಸುವ ಕೆಲಸ ಮಾಡಬೇಡ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Share This Article
Leave a comment