ರಾಜ್ಯದಲ್ಲೇ ಮಂಡ್ಯ ಎಂಪಿ ಫಸ್ಟ್‌‌:ನಿಯಮಾನುಸಾರ ದಿಶಾ ಸಭೆ ಮಾಡಿರುವ ಸುಮಲತಾ

Team Newsnap
1 Min Read
Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯನ್ನು ನಿಯಮಿತ ಕಾಲಾವಧಿಯಲ್ಲಿ ಮಾಡಿರುವ ಕೀರ್ತಿ ಮಂಡ್ಯ ಸಂಸದೆ ಸುಮಲತಾ ಅವರಿಗೆ ಸಂದಿದೆ.

ಭಾರತ ಸರ್ಕಾರದ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಿರುವ ಸರ್ಕಾರ, ಸಂಸದರು ವರ್ಷ ಪ್ರತಿ ನಾಲ್ಕು ದಿಶಾ ಸಭೆಗಳನ್ನು ನಡೆಸಬೇಕು. ಈ ನಿಯಮದಂತೆ ಮಂಡ್ಯ ಸಂಸದೆ ಸುಮಲತಾ ಅವರು ಕರಾರುವಕ್ಕಾಗಿ ಪ್ರತಿ ತ್ರೈಮಾಸಿಕವೂ ಪ್ರಗತಿ ಪರಿಶೀಲನಾ ಸಭೆ ನಡೆಸಿ ರಾಜ್ಯದ ಸಂಸದರ ಪೈಕಿ ಸುಮಲತಾ ಮೊದಲ ಸ್ಥಾನ ಪಡೆದಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ.

ಚಿತ್ರದುರ್ಗ, ಕೊಡಗು, ಮೈಸೂರು, ತುಮಕೂರು ಸಂಸದರುಗಳು ಮಾತ್ರ ಎರಡು ದಿಶಾ ಸಭೆಗಳನ್ನು ಮಾತ್ರ ಮಾಡಿದ್ದರೆ. ಉಳಿದ ಜಿಲ್ಲೆಗಳ ಸಂಸದರು ಮಾತ್ರ ಕೇವಲ ಒಂದು ಸಭೆ ಮಾಡಿ ತೃಪ್ತಿ ಪಟ್ಟು ಕೊಂಡಿದ್ದಾರೆ.

ಮಂಡ್ಯ ಸಂಸದೆ ಸುಮಲತಾ 2019ರ ಮೇ 23ರಂದು ಸಂಸತ್ ಪ್ರವೇಶ ಮಾಡಿದರು. 2019-20 ರಲ್ಲಿ ಎಲ್ಲಾ ದಿಶಾ ಸಭೆಗಳನ್ನು ಮಾಡಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ. ಕೊರೋನಾ ಮಾಹಾಮಾರಿ ಅವಾಂತರ ದಲ್ಲೂ ಕೂಡ ಸಂಸದೆ ಸಭೆಗಳನ್ನು ಮಾಡಿದ್ದಾರೆ. ಆ ಮೂಲಕ ಯೋಜನೆ ಗಳ ಕಾಮಗಾರಿ ಕುಂಠಿತಗೊಳ್ಳದಂತೆ ನೋಡಿಕೊಂಡಿದ್ದಾರೆ.

ಸಂಸದರ ನಿಧಿ ಬಳಕೆ ಮಾಡುವಲ್ಲಿಯೂ ಕೂಡ ರಾಜ್ಯದಲ್ಲಿ ಸಂಸದೆ ಸುಮಾಲತಾ ಎರಡನೇ ಸ್ಥಾನದಲ್ಲಿ ಇದ್ದಾರೆ.ಮೈಸೂರು ಸಂಸದ ಪ್ರತಾಪ್ ಸಿಂಹ ಮೊದಲ ಸ್ಥಾನ ದಲ್ಲಿ ಇದ್ದಾರೆ.

Share This Article
Leave a comment