November 25, 2024

Newsnap Kannada

The World at your finger tips!

bpl,ration,food

21 kg wheat and 14 kg rice from central for ration card holders? ಪಡಿತರ ಚೀಟಿದಾರರಿಗೆ ಇನ್ಮುಂದೆ ಕೇಂದ್ರದಿಂದ 21 ಕೆಜಿ ಗೋಧಿ ಮತ್ತು 14 ಕೆಜಿ ಅಕ್ಕಿ?

ಪಡಿತರ ಅಂಗಡಿಗಳಲ್ಲಿ ಎಂ ಆರ್ ಪಿ ದರಕ್ಕೆ ಅಡುಗೆ ಎಣ್ಣೆ, ಸಕ್ಕರೆ ,ಬೇಳೆ ಮಾರಾಟ ಮಾಡಲು ಅನುಮತಿ

Spread the love

ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಮುಂದೆ ಪಡಿತರ ಆಹಾರ ಧಾನ್ಯಗಳ ಜೊತೆಗೆ ಎಂಆರ್ ಪಿ ದರದಲ್ಲಿ ಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ, ಮೊಟ್ಟೆ ಸೇರಿ ಇನ್ನಿತರ ದಿನಸಿ ಪದಾರ್ಥಗಳನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಆಹಾರ ಸಚಿವ ಗೋಪಾಲಯ್ಯ ಪಡಿತರ ಮಾರಾಟದ ಜೊತೆಯಲ್ಲಿ ದಿನಸಿ ಪದಾರ್ಥಗಳನ್ನು ಮಾರಾಟ ಮಾಡಬಹುದು.

ಗ್ರಾಹಕರು ದಿನಸಿ ವಸ್ತುಗಳನ್ನು ಖರೀದಿಸಿದರೆ ಮಾತ್ರ ಪಡಿತರ ನೀಡುವುದಾಗಿ ನ್ಯಾಯಬೆಲೆ ಅಂಗಡಿಗಳು ಗ್ರಾಹಕರ ಮೇಲೆ ಒತ್ತಡ ಹಾಕುವಂತಿಲ್ಲ ಎಂಬ ಷರತ್ತು ಕೂಡ ಹಾಕಲಾಗಿದೆ.

ಯಾವುದೇ ವಸ್ತು ಖರೀದಿಗೆ ಒತ್ತಾಯ ಮಾಡುವಂತಿಲ್ಲ. ಇನ್ನು ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪಡಿತರ ಆಹಾರ ಧಾನ್ಯಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ

Copyright © All rights reserved Newsnap | Newsever by AF themes.
error: Content is protected !!