ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂಬ ಭಯದಿಂದ ಕಸ್ಟಮ್ಸ್ ಅಧಿಕಾರಿ ದಂಪತಿಗಳು ಸಾಗಿಸುತ್ತಿದ್ದ 75 ಲಕ್ಷ ರು ನಗದು ಹಾಗೂ ಚಿನ್ನಾಭರಣವನ್ನು,ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಇರ್ಪಾನ್ ದಂಪತಿಗಳು ಬೆಂಗಳೂರು ಮೂಲಕ ಲಖನೌ ಗೆ ಪ್ರಯಾಣ ಮಾಡಲಿದ್ದರು. ಈ ಅಧಿಕಾರಿಯ ಪತ್ನಿ ಬಾತ್ ರೂಂನಲ್ಲಿ 10 ಲಕ್ಷ ರುಪಾಯಿ ಬಿಸಾಡಿದ್ದೂ ಸೇರಿ ಒಟ್ಟಾರೆ ದಂಪತಿ ಬಳಿಯಿಂದ ಬರೋಬ್ಬರಿ 75 ಲಕ್ಷ ರು ಗಳನ್ನು ಸಿಐಎಸ್‌ಎಫ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ತಂಡ ಚೆನ್ನೈನಲ್ಲಿ ಕಸ್ಟಮ್ಸ್ ಅಧಿಕಾರಿಯಾಗಿರುವ ಮೊಹಮ್ಮದ್ ಇರ್ಫಾನ್ ಅಹ್ಮದ್ ಹಾಗೂ ಪತ್ನಿ ಬಳಿ ತಪಾಸಣೆ ಮಾಡಿದ ವೇಳೆ ಈ ವೇಳೆ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.
ಈ ದಾಳಿಯಿಂದ ಅಧಿಕಾರಿ ಪತ್ನಿ ತಪ್ಪಿಸಿಕೊಳ್ಳಲು ತನ್ನ ಬಳಿಯಿದ್ದ 10 ಲಕ್ಷ ರುಗಳನ್ನು ಬಾತ್ ರೂಂನಲ್ಲಿ ಬಿಸಾಡಿದ್ದಾರೆ. ಆ ಹಣವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಸಿಐಎಸ್‌ಎಫ್ ಅಧಿಕಾರಿಗಳು ದಂಪತಿಯಿಂದ ಎರಡು ದುಬಾರಿ ಮೌಲ್ಯದ ಮೊಬೈಲ್, ಆ್ಯಪಲ್ ವಾಚ್, ಚಿನ್ನಾಭರಣ, 74 ಲಕ್ಷದ 81 ಸಾವಿರ 500 ರು ನಗದನ್ನು ಜಪ್ತಿ ಮಾಡಲಾಗಿದೆ.
ಈ ಪ್ರಕರಣದ ತನಿಖೆಯನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
- ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
- ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
- ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
- ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
- ನಂಬುಗೆಯೇ ಇಂಬು
More Stories
ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!