ಆಸ್ಟ್ರೇಲಿಯಾ ಸೊಕ್ಕು ಅಡಗಿಸಿದ ಭಾರತೀಯರು: ಟೆಸ್ಟ್ ಸೀರಿಸ್ ಗೆದ್ದು ಬೀಗಿದ ಭಾರತದ ಸಾಧನೆ ಐತಿಹಾಸಿಕ

Team Newsnap
1 Min Read

1988 ರಿಂದಲೂ ತಮ್ಮ ಸೋಲಿನ ರುಚಿ ಕಾಣದ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಭಾರತೀಯರು ಅವರ ನೆಲದಲ್ಲೇ ಸೋಲಿನ ರುಚಿ ತೋರಿಸಿ , ಆಸ್ಟ್ರೇಲಿಯನ್ ರ ಸೊಕ್ಕು ಅಡಗಿಸಿದ್ದಾರೆ.

cricket 1

ಆಸ್ಟ್ರೇಲಿಯಾದ ಬ್ರಿಸ್ ಬೇನ್ ಗಬ್ಬಾ ಕ್ರೀಡಾಂಗಣದಲ್ಲಿ ಮಂಗಳವಾರ ಅಂತ್ಯಗೊಂಡ 4 ನೇ ಟೆಸ್ಟ್‌ ನಲ್ಲಿ ಭಾರತೀಯ ತಂಡ ಕರಾರುವಕ್ಕಾಗಿ ಆಟ ಆಡಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿಯೇ ಅನುಭವದ ಕೊರತೆಯ ನಡುವೆಯೂ ಯುವಪಡೆ ಬಲಿಷ್ಠ ಎಂದು ಬೀಗುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಣ್ಷು ಮುಕ್ಕಿಸಿದೆ.

ಭಾರತೀಯ ತಂಡದಲ್ಲಿ ಇದೇ ಮೊದಲ ಬಾರಿ ಸ್ಥಾನ ಪಡೆದ ಬ್ಯಾಟ್ಸ್‌ಮನ್ ಹಾಗೂ ಬೋಲರ್ ಗಳು 33 ವರ್ಷಗಳ ಕಾಲ ತಮ್ಮ ನೆಲದಲ್ಲಿ ಸೋಲನ್ನು ಅರಿಯದ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದಾರೆ.‌

ಬಲಾಢ್ಯ ತಂಡದ ಎದುರಿನಲ್ಲೇ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಗಿಲ್ (91) ಅಮೋಘ ಪ್ರದರ್ಶನ ನೀಡಿದರು. ರುಷಬ್ ಪಂತ್ 89 ರನ್ ಹೊಡೆದು ಔಟ್ ಆಗದೇ ಉಳಿದರು. ಬೌಲಿಂಗ್ ನಲ್ಲೂ ಸಹ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ವಿರುದ್ಧ ಆಟ ಆಡಿದ ಸಿರಾಜ್ ಕೂಡ ಕೇವಲ 73 ರನ್ ನೀಡಿ 5 ವಿಕೆಟ್ ಪಡೆದು ಭಾರತದ ಗೆಲುವಿಗೆ ಓಂಕಾರ ಹಾಕಿದರು.

ಆಡಿದ 4 ಟೆಸ್ಟ್ ಪಂದ್ಯದಲ್ಲಿ ಭಾರತ – ಆಸ್ಟ್ರೇಲಿಯಾ ತಲಾ ಇಂದು ಪಂದ್ಯಗಳನ್ನು ಗೆದ್ದುಕೊಂಡಿದ್ದವು. ಮೂರನೇ ಪಂದ್ಯ ಡ್ರಾ ಆಗಿತ್ತು. ಕೊನೆಯ ಒಂದು ಪಂದ್ಯ ಗೆಲ್ಲುವ ಮೂಲಕ ಭಾರತ ಟೆಸ್ಟ್ ಸೀರಿಸ್ ಅನ್ನು ತನ್ನ ಮಡಿಲಿಗೆ ಹಾಕಿಕೊಂಡು ಐತಿಹಾಸಿಕ ಗೆಲುವು ಸಾಧಿಸಿದಂತಾಗಿದೆ.

ಇದೇ ಮೊದಲ ಬಾರಿಗೆ ಭಾರತೀಯ ತಂಡದಲ್ಲಿ ದಿಗ್ಗಜರಿಲ್ಲದೇ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಆಟಗಾರರ ಸಾಧನೆಗೆ ದೇಶದೆಲ್ಲೆಡೆ ಅಭಿನಂದನೆಗಳು ಹರಿದು ಬರುತ್ತಿವೆ.

Share This Article
Leave a comment