ಕೇಂದ್ರದ 1 ಕೋಟಿ ನೌಕರರಿಗೆ ಡಿಎ – ಡಿಆರ್ ಘೋಷಣೆಗೆ ಸಿದ್ದತೆ?

Team Newsnap
1 Min Read

1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರಿಗೆ ಈ ತಿಂಗಳ ಅಂತ್ಯದಲ್ಲಿ ನೌಕರರ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ

ಕಳೆದ ವರ್ಷ ಜುಲೈನಿಂದ ಕೇಂದ್ರ ಸರ್ಕಾರ ಡಿಎ ಘೋಷಣೆ ಮಾಡಿರಲಿಲ್ಲ. ಸರ್ಕಾರ ನೌಕರರಿಗೆ ಪರಿಹಾರ ನೀಡಲು ಸಿದ್ಧತೆ ನಡೆಸಿದೆ.

ಡಿಆರ್ ಹೆಚ್ಚಳದ ಬಗ್ಗೆ ಸರ್ಕಾರ ಚಿಂತನೆ ?

ಕೇಂದ್ರ ನೌಕರನ ಡಿಎ ಯನ್ನು ಶೇ. 4ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಎಲ್ಲವೂ ಸರಿಯಾಗಿದ್ದರೆ ಜನವರಿ ಕೊನೆಯ ವಾರದಲ್ಲಿ ಸರಕಾರ ಘೋಷಣೆ ಮಾಡಬಹುದು. ಮತ್ತೊಂದೆಡೆ, ಸರ್ಕಾರ ಡಿಆರ್ ಅನ್ನ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

1 ಕೋಟಿಗೂ ಹೆಚ್ಚು ಉದ್ಯೋಗಿಗಳು:

ದೇಶಾದ್ಯಂತ 1 ಕೋಟಿಗೂ ಹೆಚ್ಚು ಪಿಂಚಣಿದಾರರು ಮತ್ತು ಉದ್ಯೋಗಿಗಳಿದ್ದಾರೆ.

ದೇಶದಲ್ಲಿ 48 ಲಕ್ಷ ಪಿಂಚಣಿದಾರರು ಮತ್ತು 65 ಲಕ್ಷ ಉದ್ಯೋಗಿಗಳಿದ್ದಾರೆ. ಸರ್ಕಾರ ಅವರೆಲ್ಲರ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಲಿದೆ. ಆದರೆ, ಅಧಿಕೃತ ದಿನಾಂಕ ಇನ್ನೂ ಪ್ರಕಟಿಸಿಲ್ಲ.

ಕೊರೊನಾ ತಂದಿಟ್ಟ ಸಂಕಷ್ಟದಿಂದಾಗಿ ತುಟ್ಟಿಭತ್ಯೆ ಹೆಚ್ಚಳದ ನಿರ್ಧಾರವನ್ನು ಸ್ಥಗಿತವಾಗಿತ್ತು. ಜುಲೈನಿಂದ ಎಲ್ಲವನ್ನೂ ನಿಲ್ಲಿಸಲಾಗಿದೆ. ಈಗ ಕೊರೊನಾ ಕದನ ಅಂತಿಮ ಘಟ್ಟ ತಲುಪಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಡಿಎ ಮತ್ತು ಡಿಆರ್ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.

Share This Article
Leave a comment