ನ್ಯೂಸ್ ಸ್ನ್ಯಾಪ್
ಬೆಂಗಳೂರು
ಬ್ಯಾಂಕ್ ಮ್ಯಾನೇಜರ್ ಗೆ ಅವಾಜ್ ಹಾಕಿದ ಬಜಾರಿಗೂ ಕೂಡ ಡ್ರಗ್ಸ್ ಮಾಫಿಯಾ ನಂಟಿದೆ.
ಇಂತಹದೊಂದು ಸುದ್ದಿ ಪೊಲೀಸರಿಗೆ ಖಚಿತವಾಗಿ ಸಿಕ್ಕ ನಂತರ ಸಮಗ್ರ ತನಿಖೆ ನಡೆಸಲು ಮುಂದಾಗಿದ್ದಾರೆ.
ಸಾಲ ವಸೂಲಾತಿಗಾಗಿ ಮನೆಗೆ ಹೋದ ಬ್ಯಾಂಕ್ ಮ್ಯಾನೇಜರ್ ಗೆ ಅವಾಜ್ ಹಾಕಿ, ರೇಪ್ ಕೇಸು ಹಾಕಿಸಿ ಒಳಗೆ ಹಾಕಿಸುವೆ ಎಂದು ಬಾಯಿಗೆ ಬಂದಂತೆ ಬೈದ ಸಂಗೀತ ಎಂಬ ಮಹಿಳೆಯ ವಿರುದ್ಧವೇ ಕೇಸ್ ದಾಖಲಾದ ಬೆನ್ನಲ್ಲೇ ಈಗ ಡ್ರಗ್ಸ್ ಪೆಡ್ಲರ್ ರಾಹುಲ್ ಶೆಟ್ಟಿಯೊಂದಿಗೆ ಈಕೆಯ ಹೆಸರು ತಗಲು ಹಾಕಿಕೊಂಡಿದೆ.
ಸಾಲ ಮರು ಪಾವತಿಗೆ ಬಂದಿದ್ದ ಬ್ಯಾಂಕ್ ಮ್ಯಾನೇಜರ್ ಗೆ ಈ ಸಂಗೀತ ಬಾಯಿಗೆ ಬಂದಂತೆ ಕೆಟ್ಟ ಭಾಷೆಯಲ್ಲೇ ಬೈದು ರೇಪ್ ಕೇಸ್ ಹಾಕಿಸುವುದಾಗಿ ಧಮ್ಕಿ ಹಾಕಿದ್ದಳು. ಈ ದೃಷ್ಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸಾರ್ವಜನಿಕರೂ ಕೂಡ ಸಂಗೀತಾ ವರ್ತನೆ, ದುರಹಂಕಾರದ ಮಾತುಗಳಿಗೆ ನಡತೆಯನ್ನು ಕಟುವಾಗಿ ಟೀಕಿಸಿದ್ದರು.
ಸಂಗೀತಾ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ, ಪೆಡ್ಲರ್ ರಾಹುಲ್ ಶೆಟ್ಟಿ ಜೊತೆ ಈಕೆಯ ಸ್ನೇಹವೂ ಇರುವುದರಿಂದ ಪೊಲೀಸರು ಆಕೆಯನ್ನು ಹೆಚ್ಚಿನ ವಿಚಾರಣೆ ಮಾಡುವ ಸಾಧ್ಯತೆ ಇದೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು