December 23, 2024

Newsnap Kannada

The World at your finger tips!

covidVaccine

ಕೊಡಗಿನಲ್ಲಿ ನಾಲ್ವರು ಶಿಕ್ಷಕರು, ಎಂಟು ವಿದ್ಯಾರ್ಥಿಗಳಿಗೆ ಕೊರೋನಾ ದೃಢ

Spread the love

ಕೊಡಗು ಜಿಲ್ಲೆಯಲ್ಲಿ 4 ಶಿಕ್ಷಕರು ಮತ್ತು 8 ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ 4,203 ಶಿಕ್ಷಕರು ಮತ್ತು 7,142 ಮಂದಿ ವಿದ್ಯಾರ್ಥಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಈಗ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕ ಪತ್ತೆಹಚ್ಚಲು ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ .

ಜಿಲ್ಲೆಯಲ್ಲಿ ಪ್ರಸ್ತುತ 79 ಸಕ್ರಿಯ ಪ್ರಕರಣಗಳಿದ್ದು, 38 ರಷ್ಟು ಕಂಟೈನ್’ಮೆಂಟ್ ಜೋನ್‌ಗಳಿವೆ. ಜಿಲ್ಲೆಯಲ್ಲಿ ಇದುವರೆಗೆ 1,34 ,717 ಗಂಟಲು ದ್ರವ ಸಂಗ್ರಹಿಸಿದ್ದು , 5,929 ಪಾಸಿಟಿವ್ ಪ್ರಕರಣ ದಾಖಲಾಗಿದೆ. 1,28,422 ಜನರಿಗೆ ನೆಗೆಟಿವ್ ಬಂದಿದೆ. 368 ಮಂದಿಯ ವರದಿಯ ನೀರೀಕ್ಷೆಯಲ್ಲಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!