January 29, 2026

Newsnap Kannada

The World at your finger tips!

kabbadi

ಕಬ್ಬಡ್ಡಿ ಆಡುವಾಗಲೇ ಕುಸಿದು ಬಿದ್ದು ಆಟಗಾರ ಸಾವು

Spread the love

ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಆಟಗಾರನೊಬ್ಬ ಆಡುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗಂಗಣ್ಣಪಲ್ಲಿಯಲ್ಲಿ ನಡೆದಿದೆ .

ಚೆನ್ನೂರು ಮಂಡಲದ ಕೊಂಡಪೇಟ ನಿವಾಸಿಯಾದ ನರೇಂದ್ರ ಎಂಬ ಯುವಕ ಮೃತರಾಗಿದ್ದು, ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಅವರು, ಆಡುವ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಮೃತ ಯುವಕ ಎಂ.ಕಾಂ ಪದವಿಧರ. ಸ್ಪರ್ಧೆಯಲ್ಲಿ ಕಪ್ ಗೆದ್ದು ತರುತ್ತೇನೆ ಎಂದು ತಾಯಿಯ ಬಳಿ ಹೇಳಿಹೋಗಿದ್ದ ಮಗನನ್ನು ನೆನೆದು ತಾಯಿಯ ಸಂಕಟ ಹೇಳತೀರದ್ದಾಗಿದೆ.

error: Content is protected !!