February 22, 2026

Newsnap Kannada

The World at your finger tips!

vine

ಕುಡಿದ ಮತ್ತಿನಲ್ಲಿ ಅಪ್ಪನನ್ನು ಕೆಳಗೆ ತಳ್ಳಿದ ಮಗ – ತಂದೆ ಸ್ಥಳದಲ್ಲೇ ಸಾವು

Spread the love

ಕುಡಿದ ಮತ್ತಿನಲ್ಲಿ ಮಗ ತನ್ನ ಅಪ್ಪನೊಂದಿಗೆ ಗಲಾಟೆ ಮಾಡುವಾಗ ತಂದೆ ಕೆಳಕ್ಕೆ ಬಿದ್ದು ಸಾವಿಗೀಡಾಗಿರುವ ಘಟನೆ ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಶುಯವಕ್ರವಾರ ರಾತ್ರಿ ನಡೆದಿದೆ.

ಚಿಕ್ಕಮರಳಿ ಗ್ರಾಮದ ಸಣ್ಣಮರೀಗೌಡ(೬೯) ಮೃತ ವ್ಯಕ್ತಿ. ಇವರ ಪುತ್ರ ಆರೋಪಿ ಮರೀಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮರೀಗೌಡ ಮದ್ಯಪಾನ ವ್ಯಸನಕ್ಕೆ ಒಳಗಾಗಿದ್ದು, ಪದೇ ಪದೇ ಹೆಂಡತಿ ಮಕ್ಕಳೊಂದಿಗೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಗಲಾಟೆ ವಿಚಾರವಾಗಿ ಕೆಲ ದಿನಗಳ ಹಿಂದೆ ಗಂಡ ಹೆಂಡತಿಯ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದರು. ಆ ವೇಳೆ ಗಂಡನ ಹೆಸರಿನಲ್ಲಿದ್ದ ಎಲ್ಲಾ ಆಸ್ತಿಯನ್ನು ಹೆಂಡತಿಯ ಹೆಸರಿಗೆ ನೋಂದಣಿ ಮಾಡಿಸಿದ್ದರು.

ಇದೇ ವಿಚಾರವಾಗಿ ಶುಕ್ರವಾರ ರಾತ್ರಿ ಕುಡಿದು ಹೆಂಡತಿ ಮಕ್ಕಳೊಂದಿಗೆ ಗಲಾಟೆ ಮಾಡುವ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ತಂದೆ ಸಣ್ಣಮರೀಗೌಡರನ್ನು ತಳ್ಳಿದ ಪರಿಣಾಮ ಆತನ ತಲೆ ಗೋಡೆಗೆ ಬಡಿದು ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

error: Content is protected !!