February 22, 2026

Newsnap Kannada

The World at your finger tips!

blood

ಪ್ರೇಯಸಿಯನ್ನು ಕೊಂದು, ಗೋಡೆಯಲ್ಲೇ ಹೂತಿಟ್ಟ ಪ್ರಿಯಕರ !

Spread the love

ಐದು ವರ್ಷದಿಂದ ಪ್ರೀತಿಸಿ ಲಿವ್ವಿಂಗ್ ಟುಗೆದರ್ ರೀತಿಯಲ್ಲಿ ಬಾಳಿ, ನಂತರ ಮದುವೆಯಾಗುವಂತೆ ಪ್ರಿಯತಮೆ ಒತ್ತಾಯ ಮಾಡಿದ್ದಕ್ಕಾಗಿ ಆಕೆಯನ್ನು ಕೊಂದು, ತನ್ನ ಮನೆಯ ಅರ್ಪಾಟ್ ಮೆಂಟ್ ನ ಗೋಡೆಯಲ್ಲೇ ಶವ ಹೂತಿಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರ ದ ಫಾಲ್ಘರ್ ಜಿಲ್ಲೆಯಲ್ಲಿ ನಡೆದ ಈ ಘಟನೆಗೆ ಕಾರಣನಾದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.

ಘಟನೆ ನಡೆದಿದ್ದು ಇಷ್ಟು :

ಕಳೆದ ಐದು ವರ್ಷಗಳಿಂದಲೂ 32 ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಮದುವೆ ಯಾಗುವಂತೆ ಆಕೆ ಪೀಡಿಸಿದಳು.

ಕೊನೆಗೆ ಕಳೆದ ವರ್ಷ ಅಕ್ಟೋಬರ್ 21 ರಂದು ಆಕೆಯನ್ನು ಕೊಲೆ ಮಾಡಿ ತಾನು ವಾಸವಿದ್ದ ಪ್ಲ್ಯಾಟ್ ನ ಗೋಡೆ ಯೊಂದರಲ್ಲಿ ಶವ ಹೂತಿಟ್ಟು ಆಕೆಯ ಮೊಬೈಲ್ ಸ್ವಿಚ್ ಆಪ್ ಮಾಡಿದನು.

ಆ ಮಹಿಳೆಯ ಪೋಷಕರು ನಾಪತ್ತೆ ಪ್ರಕರಣದ ದೂರು ದಾಖಲು ಮಾಡಿದರು. ಆ ಸಮಯದಲ್ಲಿ ಆತ , ಆಕೆ ಗುಜರಾತ್ ಗೆ ಹೋಗಿದ್ದಾಳೆಂದು ಹೇಳಿದನು ಎಂದು ಸುಳ್ಳು ಹೇಳಿ ಬಚಾವ್ ಆದ.

ಆದರೆ ಕೊನೆಯ ಬಾರಿಗೆ ಅಂದರೆ ಅಕ್ಟೋಬರ್ 21 ರಂದು ಆತನ ಜೊತೆಯಲ್ಲಿ ಆಕೆ ಇದ್ದಳು ಹಾಗೂ ಅಂದಿನಿಂಲೇ ಮೊಬೈಲ್ ಸ್ವಿಚ್ ಆಫ್ ಆಗಿರುವ ಬಗ್ಗೆ ಪೋಷಕರು, ಪೋಲಿಸರಿಗೆ ಮಾಹಿತಿ ನೀಡಿದರು.

ಈ ಎಲ್ಲಾ ಮಾಹಿತಿಯ ಸುಳಿವು ಹಿಡಿದು ಆ ವ್ಯಕ್ತಿಯನ್ನು ವಶಕ್ಕೆ ಪಡೆದು ಪೋಲಿಸರು ತನಿಖೆ ಆರಂಭಿದರು. ಆ ವೇಳೆ ತಾನು ಆಕೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶವವನ್ನು ಹೂತಿಟ್ಟ ಗೋಡೆಯನ್ನೂ ತೋರಿಸಿದ. ಗೋಡೆಯಲ್ಲಿ ಆಕೆಯ ಅಸ್ತಿ ಪಂಜರ ಮಾತ್ರ ಸಿಕ್ಕಿದೆ. ಪೋಲಿಸರು ತನಿಖೆ ಮುಂದುರೆಸಿದ್ದಾರೆ.

error: Content is protected !!