January 29, 2026

Newsnap Kannada

The World at your finger tips!

wedding

ಸಪ್ತಪದಿ‌‍ ತುಳಿದವನಿಗೆ ಕೈ ಕೊಟ್ಲು…ಪ್ರಿಯಕರನ ಜೊತೆ ಎಸ್ಕೇಪ್ ಆದ್ಲು!

Spread the love

ಮದುವೆ ಆದ ಮೇಲೆ ಗಂಡನಿಗೆ ಕೈಕೊಟ್ಟು ಲೌವರ್ ಜೊತೆ ನವ ವಿವಾಹಿತೆ ಎಸ್ಕೇಪ್ ಆಗಿದ್ದಾಳೆ. ಓಡಿ ಹೋಗುವಾಗ ಐದು ಲಕ್ಷ ರು ಗಳ ಚಿನ್ನಾಭರಣ, ಹಣ ಸಮೇತ ಪರಾರಿಯಾಗಿದ್ದಾಳೆ.ಈ ಘಟನೆ ಮಧ್ಯಪ್ರದೇಶ ಛತ್ತರ್ ಪುರ್ ನಲ್ಲಿ ಜರುಗಿದೆ.

ಮದುವೆಯಾದ ಮೊದಲ ಬಾರಿಗೆ ತವರು ಮನೆಗೆ ಹೋಗುವುದಾಗಿ ಗಂಡನಿಗೆ ಹೇಳಿ ಹೋದವಳು ವಾಪಸ್ಸು ಬರಲೇ ಇಲ್ಲ. ಇತ್ತ ಗಂಡ ಹೆಂಡತಿ ಯನ್ನು ಕಾಯುತ್ತಾ ಕುಳಿತಿದ್ದಾನೆ. ಕೆಲವು ದಿನಗಳಾಗದರೂ ಹೆಂಡತಿ ಬಾರದೇ ಹೋಗಿದ್ದರಿಂದ ಗಂಡ ಪೋಸರಿಗೆ ದೂರು ನೀಡಿದ್ದಾನೆ.

ಮೂರ್ತಿ ರಿಕ್ವಾರ್ (20) ಎಂಬ ಯುವತಿ ರಾಹುಲ್ ಎಂಬಾತನನ್ನು ಕಳೆದ ಡಿಸೆಂಬರ್‌ 18 ರಂದು ವಿವಾಹ ಮಾಡಿಕೊಂಡಿದ್ದಾಳೆ. ಮದುವೆಯಾದ 18 ನೇ ದಿನಕ್ಕೆ ತವರು ಮನೆಗೆ ಹೋಗುವುದಾಗಿ ಹೇಳಿ ತಾನು ಪ್ರೀತಿಸುತ್ತಿದ್ದ ಭುಜ್ಜ ಯಾದವ್ ಜೊತೆ ಸೇರಿ 5 ಲಕ್ಷ ರು ಚಿನ್ನಾಭರಣ ಹಾಗೂ 20 ಸಾವಿರ ರುಗಳೊಂದಿಗೆ ಪರಾರಿಯಾಗಿದ್ದಾಳೆ.
ಗಂಡ ರಾಹುಲ್ ನೀಡಿದ ದೂರಿನ ಮೇಲೆ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!