ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ೪೮ ದಿನಗಳಿಂದ ಚಳಿಯಲ್ಲಿ ರಸ್ತೆಯಲ್ಲಿ ಕುಳಿತು ಚಳವಳಿ ನಡೆಸುತ್ತಿದ್ದಾರೆ. ಆದರೆ, ಪ್ರಧಾನಿ ಅವರನ್ನು ಮಾತನಾಡಿಸುವ ಮನಸ್ಸು ಮಾಡಲಿಲ್ಲ. ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಆದರೂ ಅವರಿಗೆ ಬುದ್ಧಿ ಬಂದಿಲ್ಲ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡೊದಾಗಿ ಹೇಳಿದರು ರೈತರು ಒಪ್ಪಿಕೊಂಡಿಲ್ಲ. ಬಿಜೆಪಿಯವರು ನಾಚಿಕೆ ಇಲ್ಲದ ಲಜ್ಜೆಗೆಟ್ಟವರು ಎಂದು ಕಿಡಿಕಾರಿದರು.
ನರೇಂದ್ರ ಮೋದಿ ಸಬ್ಕಾ ಸಾಥ್ ಸಬ್ಕಾ ವಿಕಾಸ ಅಂತ ದೊಡ್ಡದಾಗಿ ಭಾಷಣ ಮಾಡ್ತಾರೆ. ಅಚ್ಚೇ ದಿನ್ ಆಯಾಗೆ ಅಂತಾರೆ, ಆದರೆ, ಅಚ್ಚೇ ದಿನ್ ಬದಲು ಕೊರೊನ ಆಯೇಗಾ ಆಯ್ತು. ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಬೆಲೆ ನಿರಂತರ ಏರಿಕೆ ಮಾಡುತ್ತಿದ್ದಾರೆ. ಎಲ್ಲಿ ಬಂದಿದೆ ಅಚ್ಛೇದಿನ್ ಎಂದು ಪ್ರಶ್ನಿಸಿದರು.
ಮೋದಿ ಒಬ್ಬ ಸುಳ್ಳುಗಾರ, ಸ್ವಿಜ್ ಬ್ಯಾಂಕ್‌ನಿಂಯದ ಕಪ್ಪು ಹಣ ತಂದು ದೇಶದ ಜನರ ಖಾತೆಗೆ 15 ಲಕ್ಷ ಹಾಕುತ್ತೀನಿ ಎಂದು ಒಂದು ಪೈಸೆನೂ ಹಾಕ್ಲಿಲ್ಲ. ಉದ್ಯೋಗ ಸೃಷ್ಠಿ ಮಾಡುತ್ತೀನಿ ಎಂದು ಅಧಿಕಾರಕ್ಕೆ ಬಂದರು, ಈಗ ಇರುವ ಉದ್ಯೋಗವೇ ಕಳೆದು ಹೋಗಿವೆ ಎಂದು ಕುಟುಕಿದರು.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.