ನಾನು ಗೋಮಾಂಸ ತಿಂದಿಲ್ಲ – ತಿನ್ನಬೇಕು ಎನಿಸಿದರೆ ಬಿಜೆಪಿ ಯವರನ್ನು ಕೇಳಬೇಕಾ ? ಸಿದ್ದು

Team Newsnap
1 Min Read

ನಾನು‌ ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ. ಆದ್ರೆ ತಿನ್ನಬೇಕು ಅನ್ಸಿದ್ರೆ ತಿಂತಿನಿ ಅದನ್ನ ಕೇಳೋಕೆ ಇವರು (ಬಿಜೆಪಿ) ಯಾರು? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಗೋಮಾಂಸ ತಿನ್ನೋದೆ ಸಾಧನೆ ಅಂತ ಹೇಳಿದ್ದಾರೆ. ನಾನೇನು ಅವರ ಥರ ಸೊಪ್ಪು ತಿನ್ನಲೇ. ನಾನು ಸೊಪ್ಪು ಬೇಕು ಅಂದ್ರೆ ಸೊಪ್ಪು ತಿಂತಿನಿ. ಮಾಂಸ ಬೇಕು ಅಂದ್ರೆ ಮಾಂಸ ತಿಂತಿನಿ ಎಂದು ತಿರುಗೇಟು ನೀಡಿದರು.

ನಾನೇನಾದ್ರು ಅವರಿಗೆ ಹೇಳಿದ್ದೀನಾ ಮಾಂಸ ತಿನ್ನು ಎಂದು‌. ಮತ್ತೆ ಸುಮ್ಮನೆ ತಿನ್ನೋರಿಗೆ ಯಾಕೇ ಪ್ರಶ್ನೆ. ಜಗತ್ತಿನಲ್ಲಿ ಮಾಂಸಹಾರಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದರು.

ನನ್ನ ಆಹಾರ ನನ್ನ ಹಕ್ಕು.ಅದನ್ನ ಪ್ರಶ್ನಿಸೋಕೆ ಇವರು ಯಾರು? ಯಡಿಯೂರಪ್ಪಗೆ ಗೊತ್ತಿಲ್ಲ ಹೇಳ್ತಿನಿ ಕೇಳಿ. I am making it very clear ನಾನು ಈವರೆಗೆ ಗೋಮಾಂಸ ತಿಂದಿಲ್ಲ. ನಾನು ಹಂದಿ ಮಾಂಸ ತಿಂದಿಲ್ಲ. ಆದ್ರೆ ತಿನ್ನಬೇಕು ಅನ್ನಿಸಿದ್ರೆ ತಿನ್ನುತ್ತೀನಿ. ನಾನು ತಿಂದಿರೋದು ಕೋಳಿ ಮಾಂಸ, ಕುರಿಮಾಂಸ, ಆಡಿನ ಮಾಂಸ ಮಾತ್ರ. ಆದ್ರೆ ನಮ್ಮ ಆಹಾರ ಪದ್ದತಿ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಟಾಂಗ್ ನೀಡಿದರು.

ನಿಮಗೆ ಸೊಪ್ಪು ಇಷ್ಟ ಇದ್ರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆ ಅದನ್ನ ತಿನ್ನೋಕೆ ಬಿಡಿ ಎಂದು ಸಿಎಂ ಯಡಿಯೂರಪ್ಪ ಅವರ ವಿರುದ್ದ ಕಿಡಿ ಕಾರಿದರು.

Share This Article
Leave a comment