November 24, 2024

Newsnap Kannada

The World at your finger tips!

b3806e96 4c7b 483e 8f3b 6be3575c9c11

ನಾನು ರೇಪ್ ಮಾಡಿಲ್ಲ – ಸಂಬಂಧ ಇದೆ ಮಹಾರಾಷ್ಟ್ರ ಸಚಿವ ಧನಂಜಯ ಸ್ಪಷ್ಟನೆ

Spread the love

ನಾನು ಯಾವ ಮಹಿಳೆಯನ್ನೂ ರೇಪ್ ಮಾಡಿಲ್ಲ. ಆದರೆ 2003 ಮಹಿಳೆಯೊಬ್ಬರ ಸಹೋದರಿ ಜೊತೆ ಸಂಬಂಧ ಇಟ್ಟುಕೊಂಡಿದ್ದೇನೆ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ನಮ್ಮ ಕುಟುಂಬ ದವರೂ ಒಪ್ಪಿಕೊಂಡಿದ್ದಾರೆ.

  • ಇದು ಮಹಿಳೆಯೊಬ್ಬಳು ಮಾಡಿರುವ ಅತ್ಯಾಚಾರ ಆರೋಪವನ್ನು ತಳ್ಳಿ ಹಾಕಿರುವ ಮಹಾರಾಷ್ಟ್ರದ ಸಾಮಾಜಿಕ ಮತ್ತು ನ್ಯಾಯ ಸಚಿವ ಧನಂಜಯ್​ ಮುಂಡೆ ಸಾಮಾಜಿಕ ಜಾಲತಾಣದಲ್ಲಿ ಕರೆದುಕೊಂಡಿರುವ ರೀತಿ.

ನಂಗೆ ಮಹಿಳೆಯ ಸಹೋದರಿ ಜತೆ 2003ರಿಂದಲೂ ಸಂಬಂಧ ಹೊಂದಿರುವುದಾಗಿ ಸಚಿವರು ಒಪ್ಪಿಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ಏನಿದೆ?

ಸಚಿವ ಧನಂಜಯ ಮುಂಡೆ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿರುವ ಪ್ರಕಾರ
38 ವರ್ಷದ ಮಹಿಳೆ ಮತ್ತು ಆಕೆಯ ಸಹೋದರಿ ಬ್ಲ್ಯಾಕ್​ಮೇಲ್​ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ನನ್ನಿಂದ ಹಣವನ್ನು ಸುಲಿಗೆ ಮಾಡಿದ್ದಾರೆಂದು ಪ್ರತ್ಯಾರೋಪ ಮಾಡಿದ್ದಾರೆ.
ಈ ಕುರಿತಂತೆ ತಾನು ಸಹ 2020ರ ನವೆಂಬರ್​ನಲ್ಲಿ ಪೊಲೀಸ್​ ರಿಗೆ ದೂರು ನೀಡಿರುವುದಾಗಿ ಹೇಳಿದ್ದಾರೆ.

ಮಹಿಳೆಯೊಂದಿಗೆ ಸಂಬಂಧ ಇರುವುದನ್ನು ಧನಂಜಯ್​ ಮುಂಡೆ ಒಪ್ಪಿಕೊಂಡ ಬೆನ್ನಲ್ಲೇ ಮಹಾರಾಷ್ಟ್ರ ಬಿಜೆಪಿ ಮಹಿಳಾ ವಿಭಾಗ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ಪತ್ರ ಬರೆದು ಸಂಪುಟದಿಂದ ಧನಂಜಯ್​ರನ್ನು ಕೈ ಬಿಡುವಂತೆ ಒತ್ತಾಯಿಸಿದೆ.

ಘಟನೆ ಯ ಹಿನ್ನೋಟ:

ಜನವರಿ 11ರಂದು ಗಾಯಕಿ ರೇಣು ಶರ್ಮಾ ತನ್ನ ವಕೀಲರೊಂದಿಗೆ ಅಂಧೇರಿಯ ಒಶಿವರಾ ಪೊಲೀಸ್​ ಠಾಣೆಗೆ ಆಗಮಿಸಿ ಧನಂಜಯ್​ ಮುಂಡೆ ವಿರುದ್ಧ ರೇಪ್​ ದೂರು ದಾಖಲಿಸಿದ್ದರು.

1997ರಿಂದಲೂ ನನಗೆ ಧನಂಜಯ್​ ಪರಿಚಯವಿದೆ. ಮದುವೆ ಯಾಗುವುದಾಗಿ ಮತ್ತು ಬಾಲಿವುಡ್​ನಲ್ಲಿ ಗಾಯಕಿಯಾಗಲು ಸಹಾಯ ಮಾಡುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ರೇಣು ಪರ ವಕೀಲ ರಮೇಶ್​ ತ್ರಿಪಾಠಿ ಎಂಬುವರು ಮಾತನಾಡಿ ದೂರು ದಾಖಲಾದ ದಿನದಿಂದ ಈವರೆಗೂ ಎಫ್​ಐಆರ್​ ದಾಖಲು ಮಾಡಿಲ್ಲ ಎಂದು ಆರೋಪಿಸಿದ್ದಾರೆ.

2008ರಲ್ಲಿ ಮೊದಲ ಬಾರಿಗೆ ಧನಂಜಯ್​ ಮುಂಡೆ ರೇಪ್​ ಮಾಡಿದ್ದಾರೆ. ಮನೆಯಲ್ಲಿ ರೇಣು ಒಂಟಿಯಾಗಿರುವಾಗ ರೇಪ್​ ಮಾಡಿ, ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲಿಂದಾಚೆಗೆ ಅನೇಕ ಬಾರಿ ಕೃತ್ಯವೆಸಗಿದ್ದಾರೆ. 2019ರಲ್ಲಿ ಮದುವೆಯಾಗಲು ನಿರಾಕರಿಸಿದರು. ಏನಾದರೂ ಬಹಿರಂಗಪಡಿಸಿದರೆ, ವಿಡಿಯೋ ಸೋರಿಕೆ ಮಾಡುವುದಾಗಿ ಹೆದರಿಸುತ್ತಿದ್ದಾರೆಂದು ದೂರು ದಾಖಲಿಸಲಾಗಿದೆ.

ಎಫ್​ಐಆರ್​ ದಾಖಲು ಮಾಡಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ರೇಣುಗೆ ಏನಾದರೂ ಆದರೆ ನ್ಯಾಯಾಲಯ ಮೆಟ್ಟಿಲೇರುತ್ತೇವೆ. ಮುಂದಾಗುವುದಕ್ಕೆಲ್ಲ ಧನಂಜಯ್​ ಅವರೇ ನೇರ ಹೊಣೆ ಎಂದು ವಕೀಲ ರಮೇಶ್ ತ್ರಿಪಾಠಿ ಹೇಳಿದ್ದಾರೆ.

ಜ. 11ರಂದು ದೂರಿನ ಪ್ರತಿಯನ್ನು ಶೇರ್​ ಮಾಡಿ ಟ್ವೀಟ್​ ಮಾಡಿರುವ ರೇಣು ಶರ್ಮಾ, ನಾನು ಸಚಿವ ಧನಂಜಯ್​ ವಿರುದ್ಧ ಅತ್ಯಾಚಾರ ಮತ್ತು ಬೆದರಿಕೆ ಪ್ರಕರಣ ದಾಖಲಿಸಿದ್ದೇನೆ. ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಹಾರಾಷ್ಟ್ರ ಪೊಲೀಸರು ನನ್ನ ದೂರಿನ ಬಗ್ಗೆ ನಿರಾಸಕ್ತಿ ತೋರಿದ್ದಾರೆ ಎಂದು ಆರೋಪಿಸಿ ನನ್ನ ಜೀವ ಅಪಾಯದಲ್ಲಿದೆ ಸಹಾಯ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಪತ್ನಿ ಮಮತಾರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಅವರಿಗೂ ಟ್ಯಾಗ್​ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!