February 21, 2026

Newsnap Kannada

The World at your finger tips!

covidVaccine

ಕೋವಿಶೀಲ್ಡ್ ಗಿಂತ ಕೊವ್ಯಾಕ್ಸಿನ್ ಲಸಿಕೆ ದುಬಾರಿ- 2 ಲಸಿಕೆ ಪ್ರತಿ ಡೋಸ್‍ಗೆ ಎಷ್ಟು ಬೆಲೆ?

Spread the love
  • ಕೊವ್ಯಾಕ್ಸಿನ್ ಲಸಿಕೆ ಪ್ರತಿ ಡೋಸ್ 295 ರು .
  • ಕೋವಿಶೀಲ್ಡ್ ಲಸಿಕೆ ಪ್ರತಿ ಡೋಸ್ ಗೆ 210 ರು

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆ ಸರ್ಕಾರದೊಂದಿಗೆ ಬೆಲೆ ಒಪ್ಪಂದ ಮಾಡಿಕೊಂಡಿದೆ.
ಪ್ರತಿ ಡೋಸ್‍ಗೆ 295 ರು.ಗೆ ಮಾರಾಟ ಮಾಡಲಿದೆ ಎಂಬ ವರದಿಗಳು ಬಂದಿವೆ.

ಜನವರಿ 14ರಂದು ಮೊದಲು 12 ಕೇಂದ್ರಗಳಲ್ಲಿ, ಸುಮಾರು 55 ಲಕ್ಷ ಡೋಸ್‍ಗಳನ್ನು ಪೂರೈಸಲು ಕೇಂದ್ರ ಸರ್ಕಾರ ಭಾರತ್ ಬಯೋಟೆಕ್‍ಗೆ ಸೂಚಿಸಿದೆ.

ಮೊದಲ ಹಂತದಲ್ಲಿ ಕನಿಷ್ಠ 38.5 ಲಕ್ಷ ಮತ್ತು ಎರಡನೇ ಹಂತದಲ್ಲಿ 16.5 ಲಕ್ಷ ಲಸಿಕೆಯನ್ನು ಪೂರೈಸಲಾಗುತ್ತದೆ. 231 ಕೋಟಿ ಮೌಲ್ಯದ 1.1 ಕೋಟಿ ಡೋಸ್ ಲಿಸಿಕೆ ಪೂರೈಕೆಯಾಗಲಿದೆ. ಒಟ್ಟು 4.5 ಕೋಟಿ ಡೋಸ್ ಗಳಿಗಾಗಿ ಕೇಂದ್ರ ಸರ್ಕಾರ 1,176 ಕೋಟಿಗೆ ಸದ್ಯದ ದರಕ್ಕೆ ಒಪ್ಪಂದ ಮಾಡಿಕೊಂಡಿದೆ.

210 ರು ಪ್ರತಿ ಡೋಸ್ ಗೆ

ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಜೊತೆ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಗೆ 200 ರೂ. ಪ್ಲಸ್ ಜಿಎಸ್‍ಟಿ ಸೇರಿದಂತೆ ಒಪ್ಪಂದ ಮಾಡಿಕೊಂಡಿದೆ. ಏಪ್ರಿಲ್ 2021ರೊಳಗೆ 4.5 ಕೋಟಿ ಡೋಸ್ ಸೆರಂ ವಿತರಿಸಲಿದೆ. ಜಿಎಸ್‍ಟಿಯೂ ಸೇರಿದಂತೆ ಕೋವಿಶೀಲ್ಡ್ ಪ್ರತಿ ಡೋಸ್‍ಗೆ 210 ರೂ. ಆಗಲಿದೆ.

error: Content is protected !!