ತಮಿಳುನಾಡು ಸರ್ಕಾರ ಆನ್‍ಲೈನ್ ಕ್ಲಾಸ್‍ಗಾಗಿ ವಿದ್ಯಾರ್ಥಿಗಳಿಗೆ ನಿತ್ಯವೂ ಉಚಿತವಾಗಿ 2ಜಿಬಿ ಡೇಟಾ ನಿರ್ಧಾರ ಮಾಡಿದೆ.
2021 ಜನವರಿಯಿಂದ ಏಪ್ರಿಲ್ ವರೆಗೆ ಉಚಿತ ಡೇಟಾ ನೀಡಲಾಗುವುದು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ.
ಕೊರೊನಾದಿಂದಾಗಿ ಶಾಲಾ ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಈಗಲೂ ತರಗತಿಗಳು ಆನ್‍ಲೈನ್‍ನಲ್ಲಿ ನಡೆಯುತ್ತಿದೆ. ಹಾಗಾಗಿ ವಿದ್ಯಾರ್ಥಿಗಳ ಆನ್‍ಲೈನ್ ತರಗತಿಗೆ ನೆರವಾಗುವ ಉದ್ದೇಶದಿಂದ 2 ಜಿಬಿ ಡೇಟಾವನ್ನು ಉಚಿತವಾಗಿ ನೀಡಲಾಗುವುದು. ತಮಿಳುನಾಡಿನಲ್ಲಿ ಒಟ್ಟು 9.69 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಲೆ ಮತ್ತು ವಿಜ್ಞಾನ ಕಾಲೇಜುಗಳು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸ್ಕಾಲರ್‌ಶಿಪ್ -ಫಂಡೆಡ್ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಈ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಯ ಅನ್ವಯ ಮುಂದಿನ ನಾಲ್ಕು ತಿಂಗಳು ಪ್ರತಿ ದಿನ 2 ಜಿಬಿ ಡೇಟಾ ಸರ್ಕಾರ ಒದಗಿಸಲಿದೆ
ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2020ರ ಡಿಸೆಂಬರ್ 2 ರಿಂದ ಮತ್ತು ಪದವಿಪೂರ್ವ ಕಾಲೇಜು, ಮೆಡಿಕಲ್ ಕಾಲೇಜುಗಳನ್ನು 2020ರ ಡಿಸೆಂಬರ್ 7 ರಂದು ಪ್ರಾರಂಭಿಸಿರುವ ತಮಿಳುನಾಡು ಸರ್ಕಾರ ಪದವಿ ಪೂರ್ವ ತರಗತಿಗಳು ಮತ್ತು ಪ್ರಥಮ ಪದವಿ ತರಗತಿಗಳನ್ನು ಮುಂದಿನ ತಿಂಗಳ ಮೊದಲ ವಾರದಿಂದ ಆರಂಭಿಸಲು ನಿರ್ಧಾರ ಮಾಡಿಕೊಂಡಿದೆ.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ