ಇಂಡೊನೇಷ್ಯಾ ವಿಮಾನ ಪತನ : ಜಾವಾ ಸಮುದ್ರದಲ್ಲಿ 62 ಮೃತ ದೇಹ – ವಿಮಾನ ಅವಶೇಷಗಳು ಪತ್ತೆ

Team Newsnap
1 Min Read

ಇಂಡೊನೇಷ್ಯಾ ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಬೋಯಿಂಗ್ 737-500 ಟೇಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡ ಜಾವಾ ಸಮುದ್ರದಲ್ಲಿ ಅವಶೇಷಗಳು ಪತ್ತೆಯಾಗಿದೆ.

ಈ ವಿಮಾನದಲ್ಲಿದ್ದ 62 ಜನರ ಮೃತದೇಹಗಳು, ಬಟ್ಟೆಗಳು, ವಿಮಾನ ಅವಶೇಷಗಳು ಸಮುದ್ರದಲ್ಲಿ ಪತ್ತೆಯಾಗಿದೆ.

ಇಂಡೊನೇಷ್ಯಾ ರಾಷ್ಟ್ರೀಯ ರಕ್ಷಣಾ ಸಂಸ್ಥೆಯು, ʻಸಮುದ್ರದಲ್ಲಿ ದೇಹದ ಭಾಗಗಳು, ಬಟ್ಟೆ ತುಂಡುಗಳು, ಲೋಹದ ತುಣುಕುಗಳು ದೊರೆತಿವೆʼ ಎಂದು ಮಾಹಿತಿ ನೀಡಿದೆ.

ವಿಮಾನದಲ್ಲಿ 50 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಇದ್ದರು. ಭಾರಿ ಮಳೆಯ ಕಾರಣ 30 ನಿಮಿಷ ತಡವಾಗಿ ಬೋಯಿಂಗ್‌ 737–500 ವಿಮಾನವು ಟೇಕ್‌ ಆಫ್‌ ಆಗಿತ್ತು.

ಪಶ್ಚಿಮ ಕಾಲಿಮಂತನ್‌ ಪ್ರಾಂತ್ಯದ ಪಾಂಟಿಯಾನಾಕ್‌ಗೆ ತೆರಳುತ್ತಿದ್ದ ಈ ವಿಮಾನವು ಕೆಲವೇ ನಿಮಿಷದಲ್ಲಿ ರೇಡಾರ್‌ನಿಂದ ನಾಪತ್ತೆಯಾಗಿತ್ತು.

Share This Article
Leave a comment