ಮಾಹಾ ಮಾರಿ ಕೊರೋನಾಗೆ ಮುಕ್ತಿ ಹಾಡಲು ಜ. 16 ರಿಂದ ಲಸಿಕೆ ಹಾಕುವ ಕಾರ್ಯಕ್ಕೆ ನಾಂದಿ

Team Newsnap
1 Min Read

ಕಳೆದ ಮಾಚ್೯ ನಿಂದ ದೇಶದ ಜನರನ್ನು ಕಾಡಿದ ಕೊರೋನಾ ಮಾಹಾ ಮಾರಿಗೆ ಅಂತ್ಯ ಹಾಡುವ ದಿನಗಳು ಬಂದೇ ಬಿಟ್ಟಿತು.

ಕೇಂದ್ರ ಸರ್ಕಾರ ದೇಶದಾದ್ಯಂತ ಕೊರೋನಾ ಮುಕ್ತಿಗೆ ಲಸಿಕೆ ವಿತರಣೆ ಮಾಡಲು ದಿನಾಂಕ ನಿಗದಿ ಮಾಡಿದೆ ಜನವರಿ 16 ರಿಂದ ಇದಕ್ಕೆ ಚಾಲನೆ ಸಿಗಲಿದೆ.

ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಪೂರ್ವಭಾವಿ ತಯಾರಿಗಾಗಿ ಡ್ರೈ ರನ್‌ ನಡೆಸಲಾಗಿದೆ. ಇದೀಗ ಲಸಿಕೆ ನೀಡಿಕೆಗೆ ಅಧಿಕೃತವಾಗಿ ಜನವರಿ 16 ರಂದು ಚಾಲನೆ ಸಿಗಲಿದೆ.

ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‌ ಗಳಿಗೆ ಲಸಿಕೆ ನೀಡಲಾಗುವುದು. ಇದಕ್ಕಾಗಿ ಈಗಾಗಲೇ ಅವರುಗಳಿಂದ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲೇ ಅವರುಗಳ ಮೊಬೈಲ್‌ ಗೆ ಲಸಿಕೆ ನೀಡುವ ಕುರಿತು ಸಂದೇಶ ರವಾನೆಯಾಗಲಿದೆ.

ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಎಂಬ ಎರಡು ಲಸಿಕೆಗಳಿಗೆ ಭಾರತ ಸರ್ಕಾರ ಅನುಮತಿ ನೀಡಿದೆ. ಈ ಎರಡೂ ಕೂಡಾ ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಿರುವುದು ಆತ್ಮ ನಿರ್ಭರತೆಗೆ ಸಾಕ್ಷಿಯಾಗಿದೆ.

ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಜೊತೆಗೆ ಆಸ್ಪತ್ರೆಗೆ ದಾಖಲಾಗಿ ತುರ್ತು ಅಗತ್ಯ ವಿರುವವರಿಗೂ ಲಸಿಕೆ ನೀಡುವ ಯೋಜನೆಯನ್ನು ಸರ್ಕಾರ ಹೊಂದಿದೆ.

ಸಿದ್ದಗೊಂಡಿರುವ ಲಸಿಕೆಯನ್ನು ಈಗಾಗಲೇ ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಜನವರಿ 16 ರಿಂದ ಲಸಿಕೆ ನೀಡಿಕೆ ಕಾರ್ಯ ಆರಂಭವಾಗಲಿದೆ.

Share This Article
Leave a comment