February 20, 2026

Newsnap Kannada

The World at your finger tips!

BJP , Congress , MLC

ಪರಿಷತ್ ಗಲಾಟೆ ವಿಚಾರಣೆಗೆ‌ ಸದನ ಸಮಿತಿ : ಸದಸ್ಯ ಸ್ಥಾನಕ್ಕೆ ವಿಶ್ವನಾಥ್, ಸುಂಕನೂರು ರಾಜೀನಾಮೆ

Spread the love

2020ರ ಡಿಸೆಂಬರ್‌ 15 ರಂದು ಪರಿಷತ್ʼನಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ರಚನೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

ಬಿಜೆಪಿ ಸದಸ್ಯರು ವಿರೋಧ ವ್ಯಕ್ತ ಪಡಿಸಿ, ರಾಜೀನಾಮೆ ನೀಡಿರುವುದು ಗಮನ ಸೆಳೆದಿದೆ.

ಪರಿಷತ್‌ ಗಲಾಟೆಗೆ ಸಂಬಂಧಿಸಿದಂತೆ ಸದನ ಸಮಿತಿ ಮರಿತಿಬ್ಬೇಗೌಡ ಅಧ್ಯಕ್ಷತೆಯಲ್ಲಿ ಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸಮಿತಿಯನ್ನು ರಚಿಸಲು ಸರ್ಕಾರ ಮುಂದಾಗಿದೆ. ಆದರೆ ಈ ಸಮಿತಿ ರಚನೆಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧದ ಬೆನ್ನೆಲ್ಲೇ ಸಮಿತಿ ಸದಸ್ಯರಾಗಿದ್ದ ಹೆಚ್.‌ ವಿಶ್ವನಾಥ್‌, ಸುಂಕನೂರು ರಾಜೀನಾಮೆ ನೀಡಿ, ಸಮಿತಿ ರಚನೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ

error: Content is protected !!