November 24, 2024

Newsnap Kannada

The World at your finger tips!

sudhakar1

ಸೋಮವಾರದಿಂದಲೇ ರಾಜ್ಯದಲ್ಲಿ ಲಸಿಕೆ ವಿತರಣೆ: ಸಚಿವ ಸುಧಾಕರ್

Spread the love

ಸೋಮವಾರದಿಂದ ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಶನಿವಾರ ಕೇಂದ್ರದಿಂದಡ ರಾಜ್ಯಕ್ಕೆ 13 ಲಕ್ಷದ 90 ಸಾವಿರ ಕೋವಿಡ್-19 ಲಸಿಕೆ ಬರಲಿದೆ ಎಂದರು

ಜ.11 ರಿಂದಲೇ ( ಸೋಮವಾರ) ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದೆ. ಲಸಿಕೆಯನ್ನು ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲಿದ್ದೇವೆ ಎಂದರು.

ಕೋವಿಡ್-19 ನಿಯಂತ್ರಣ ಮಾಡುವ ಕಾರ್ಯ ಭಾರತ ಯಶಸ್ವಿಯಾಗಿದೆ. ಇಡೀ ದೇಶದಲ್ಲಿ 9000 ಸಕ್ರಿಯ ಪ್ರಕರಣಗಳಿವೆ. ಶೇ.98ರಷ್ಟು ಜನ ಗುಣಮುಖರಾಗುತ್ತಿದ್ದಾರೆ. ಶೇ.1.2 ರಿಂದ ಶೇ.1.3 ರಷ್ಡು ಸಾವಿನ ಪ್ರಮಾಣ ಆಗಿದೆ ಎಂದು ಹೇಳಿದರು.

ಈ ಅಂಕಿ ಅಂಶಗಳೇ ರಾಜ್ಯಸರ್ಕಾರ ಯಶಸ್ವಿಯಾಗಿ ಕೊರೊನಾ ನಿರ್ವಹಣೆ ಮಾಡಿದೆ ಅನ್ನೋದಕ್ಕೆ ನಿದರ್ಶನ. ಲಸಿಕೆಯ ವಿವರಗಳನ್ನು ಸಂಜೆಯೊಳಗೆ ಮಾಹಿತಿ ತಿಳಿಸುತ್ತೇನೆ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!