ಹಿರಿಯ ಪೊಲೀಸ್ ಅಧಿಕಾರಿಯಾದ ಮಗಳಿಗೆ ಸೆಲ್ಯೂಟ್ ಮಾಡಿದ ಹೆಮ್ಮೆಯ ಇನ್ಸ್‌ಪೆಕ್ಟರ್ ತಂದೆ!
ಸರ್ಕಲ್ ಇನ್ಸ್‌ಪೆಕ್ಟರ್ ಆಗಿರುವ ವೈ ಶ್ಯಾಮ್ ಸುಂದರ್ ಅವರು ಗುಂಟೂರ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಲ್ಲಿ ರುವ(DYSP) ಮಗಳು ಎಂಡ್ಲೂರು ಜೆಸ್ಸಿ ಪ್ರಶಾಂತಿ ಅವರಿಗೆ ಸಲ್ಯೂಟ್ ಹೊಡೆದಿದ್ದಾರೆ.
ತಿರುಪತಿಯಲ್ಲಿ ನಡೆದ ಇಗ್ನೈಟ್ ಕಾರ್ಯಕ್ರಮದ ವೇಳೆ ಹಾಜರಾಗಿದ್ದ ತಂದೆ-ಮಗಳ ಅದ್ಭುತ ದೃಶ್ಯವನ್ನು ನೆರೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಕ್ಯಾಮೆರಾದ ಮೂಲಕ ಸೆರೆಹಿಡಿದಿದ್ದಾರೆ.
ತಿರುಪತಿಯಲ್ಲಿ ರಾಜ್ಯ ಪೊಲೀಸ್ ಕರ್ತವ್ಯ ಸಭೆಯನ್ನು ಆಯೋಜಿಸಲಾಗಿತ್ತು. ಜನವರಿ 4 ರಿಂದ 7ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಈ ವೇಳೆ ಸರ್ಕಲ್ ಇನ್ಸ್‌ಪೆಕ್ಟರ್ ವೈ ಶ್ಯಾಮ್ ಸುಂದರ್ ತಮ್ಮ ಮಗಳನ್ನು ಕಂಡು ಹತ್ತಿರ ಬಂದು ಸಲ್ಯೂಟ್ ಹೊಡೆದಿದ್ದಾರೆ. ತಂದೆ ತನಗೆ ಸಲ್ಯೂಟ್ ಹೊಡೆಯುತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ ಜೆಸ್ಸಿ ಪ್ರಶಾಂತಿ ಅವರು ಅಪ್ಪ ಎಂದು ಕರೆದಿದ್ದಾರೆ.
ಇದು ಯಾವುದೇ ಪೋಷಕರಿಗೂ ಅತ್ಯಂತ ಹೆಮ್ಮೆಯ ಕ್ಷಣ. ತಾವು ಆಡಿಸಿ, ಬೆಳೆಸಿ, ಓದಿಸಿದ ಮಗು ತಮಗಿಂತಲೂ ಉನ್ನತ ಸ್ಥಾನಕ್ಕೆ ಏರಿದಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಇದನ್ನು ಅತ್ಯಂತ ಗರ್ವದಿಂದ ಪೋಷಕರು ಹೇಳಿಕೊಳ್ಳಬಹುದಾಗಿದೆ.
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ