February 21, 2026

Newsnap Kannada

The World at your finger tips!

YADIYURAPPA1

ಒಂದು ಜಿಲ್ಲೆ ಒಂದು ಉತ್ಪನ್ನ ರಾಜ್ಯ ಸರ್ಕಾರದ ಹೊಸ ಯೋಜನೆ

Spread the love

ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾದ ಪರಿಕಲ್ಪನೆಯ ಭಾಗವಾಗಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ಯೋಜನೆ ಜಾರಿಗೆ ಬರುತ್ತದೆ. ‌

ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿನ ಕೆಲವು ಮಾಹಿತಿ ನೀಡಿದ್ದಾರೆ.

ಈ ಕಾರ್ಯಕ್ರಮದಡಿ 30 ಜಿಲ್ಲೆಗಳ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ಹಾಗೂ ಆರ್ಥಿಕ ನೆರವು, ಉದ್ಯೋಗಾವಕಾಶ ದೊರೆಯಲಿದೆ ಎಂದಿದ್ದಾರೆ.

”ಒಂದು ಜಿಲ್ಲೆ- ಒಂದು ಉತ್ಪನ್ನ” ಎಂಬ ಈ ಯೋಜನೆಯಡಿ ಈ ಕೆಳಗಿನ ಆಯಾ ಜಿಲ್ಲೆಯ ಉತ್ಪನ್ನಗಳಿಗೆ ಉತ್ತಮ ಪ್ರೋತ್ಸಾಹ ಸಿಗಲಿದೆ ಎಂಬುದರ ಪಕ್ಷಿನೋಟ

1 ಬಾಗಲಕೋಟೆಯ ಈರುಳ್ಳಿ,
2 ಬೆಳಗಾವಿಯ ಬೆಲ್ಲ,
3 ಬಳ್ಳಾರಿಯ ಹಂದಿ,
4 ಬೆಂಗಳೂರು ಗ್ರಾಮಾಂತರ – ಪೌಲ್ಟ್ರಿ ಉತ್ಪನ್ನ,
5 ಬೆಂಗಳೂರು ನಗರ-ಬೇಕರಿ ಉತ್ಪನ್ನ, 6 ಚಾಮರಾಜನಗರ -ಅರಿಶಿಣ,
7 ಚಿಕ್ಕಬಳ್ಳಾಪುರ-ಟೊಮ್ಯಾಟೋ,
8 ಚಿಕ್ಕಮಗಳೂರಿನ ಸಾಂಬಾರು ಪದಾರ್ಥ,
9 ಚಿತ್ರದುರ್ಗದ ಕಡಲೆಕಾಯಿ ಉತ್ಪನ್ನ,
10 ದಕ್ಷಿಣ ಕನ್ನಡ- ಸಾಗರ ಉತ್ಪನ್ನಗಳು, 11 ದಾವಣೆಗೆರೆ-ಸಿರಿ ಧಾನ್ಯಗಳು, ಧಾರವಾಡದ ಮಾವು,
12 ಗದಗ್ ನ ಬ್ಯಾಡಗಿ ಮೆಣಸಿನಕಾಯಿ,
13 ಹಾಸನದ ತೆಂಗು ಉತ್ಪನ್ನಕ್ಕೆ ಆದ್ಯತೆ ಸಿಗಲಿದೆ
14 ಕೋಲಾರ ಟೊಮೋಟೊ
15 ಕೊಡಗು ಕಾಫಿ
16 ಹಾವೇರಿ ಮಾವು
17 ಬೀದರ್ ಶುಂಠಿ.
18 ಮಂಡ್ಯ ಬೆಲ್ಲ

ಕರ್ನಾಟಕದ 30 ಜಿಲ್ಲೆಗಳ ಪ್ರಮುಖ ಸಾಂಪ್ರದಾಯಿಕ ಉತ್ಪನ್ನ /ಬೆಳೆಗಳಿಗೆ ವಿಶೇಷ ಪ್ರೋತ್ಸಾಹ, ಆರ್ಥಿಕ ನೆರವು, ಉದ್ಯೋಗಾವಕಾಶ ದೊರೆಯಲಿದೆ.

bele
error: Content is protected !!