ಗಂಗೂಲಿಗೆ ಚಿಕಿತ್ಸೆ ನೀಡಲು ಡಾ. ದೇವಿ ಶೆಟ್ಟಿ ಕೊಲ್ಕತ್ತಾಗೆ ಭೇಟಿ – ಬುಧವಾರ ಡಿಸ್ಚಾಜ್೯ ಸಾಧ್ಯತೆ

Team Newsnap
2 Min Read

ಕರ್ನಾಟಕದ ಹೃದಯ ಶಸ್ತ್ರಚಿಕಿತ್ಸೆ ತಜ್ಞ ಡಾ. ದೇವಿ ಶೆಟ್ಟಿ ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಹೃದಯ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಸೋಮವಾರ ಸೇರಿದ್ದಾರೆ.

ಲಘು ಹೃದಯಾಘಾತದ ಬಳಿಕ ಈಗಾಗಲೆ ಆಯಂಜಿಯೋಪ್ಲಾಸ್ಟಿಗೆ ಒಳಗಾಗಿರುವ 48 ವರ್ಷದ ಗಂಗೂಲಿ ಅವರಿಗೆ ನೀಡಬೇಕಾಗಿರುವ ಮುಂದಿನ ಚಿಕಿತ್ಸೆಯ ಬಗ್ಗೆ ಡಾ. ದೇವಿ ಶೆಟ್ಟಿ ವೈದ್ಯರ ತಂಡದೊಂದಿಗೆ ಚರ್ಚೆ ಮಾಡಿದರು.

9 ವೈದ್ಯ ರ ತಂಡ ರಚನೆ:

ಗಂಗೂಲಿ ಹೃದಯ ಚಿಕಿತ್ಸೆಗಾಗಿ ಒಟ್ಟು 9 ವೈದ್ಯರ ತಂಡವನ್ನು ರಚಿಸಲಾಗಿದೆ. ಕೋಲ್ಕತದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಗಂಗೂಲಿಗೆ ಚಿಕಿತ್ಸೆ ನೀಡುತ್ತಿರುವ ತಂಡದೊಂದಿಗೆ ಕನ್ನಡಿಗ ಡಾ. ದೇವಿ ಶೆಟ್ಟಿ ಜತೆಗೆ ಮತ್ತೋರ್ವ ಹೃದಯ ತಜ್ಞ ಡಾ. ಆರ್‌ಕೆ ಪಾಂಡೆ ಕೂಡ ವರ್ಚುವಲ್ ಮೂಲಕ ಪಾಲ್ಗೊಂಡಿ ದ್ದಾರೆ.

ಅಮೇರಿಕಾ ವೈದ್ಯರ ಜೊತೆ ಚಚೆ೯ :

ಅಮೆರಿಕದಿಂದಲೂ ವೈದ್ಯರೊಬ್ಬರು ದೂರವಾಣಿ ಮೂಲಕ ವೈದ್ಯರ ತಂಡದೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಡಾ. ದೇವಿ ಶೆಟ್ಟಿ ಮಂಗಳವಾರ ಕೋಲ್ಕತದಲ್ಲಿ ಗಂಗೂಲಿ ಅವರನ್ನು ಭೇಟಿಯಾಗಿ ಪರಿಶೀಲನೆ ನಡೆಸಲಿದ್ದಾರೆ.

ಈಗ ಎದೆ ನೋವು ಕಾಣಿಸಿಕೊಂಡಿಲ್ಲ:

ಗಂಗೂಲಿಗೆ ಈಗಲೆ ಮತ್ತೊಮ್ಮೆ ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡುವ ಅಗತ್ಯವಿಲ್ಲ. ಸದ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಈ ಚಿಕಿತ್ಸೆ ನೀಡಬಹುದು. ಗಂಗೂಲಿ ಈಗ ಯಾವುದೇ ರೀತಿಯ ಎದೆ ನೋವು ಹೊಂದಿಲ್ಲ ಎಂದು ವೈದ್ಯರ ತಂಡ ಒಮ್ಮತದ ಅಭಿಪ್ರಾಯ ಕೈಗೊಂಡಿದೆ ಎಂದು ಆಸ್ಪತ್ರೆಯ ಎಂಡಿ ಹಾಗೂ ಸಿಇಒ ಡಾ. ರೂಪಾಲಿ ಬಸು ತಿಳಿಸಿದ್ದಾರೆ.

ಹೃದಯದಲ್ಲಿ 3 ರಕ್ತ ನಾಳಗಳು ಬ್ಲಾಕ್ :

ವೈದ್ಯರ ತಂಡದ ಸಭೆಯಲ್ಲಿ ಗಂಗೂಲಿ ಕುಟುಂಬದ ಸದಸ್ಯರೂ ಪಾಲ್ಗೊಂಡಿದ್ದರು ಮತ್ತು ಅವರಿಗೆ ಮುಂದಿನ ಚಿಕಿತ್ಸಾ ಯೋಜನೆಯ ಬಗ್ಗೆ ವಿವರಿಸಲಾಗಿದೆ. ಗಂಗೂಲಿ ಬುಧವಾರ ಮನೆಗೆ ಮರಳಿದ ಬಳಿಕವೂ ವೈದ್ಯರ ತಂಡ ಆರೋಗ್ಯದ ಮೇಲೆ ಕಣ್ಣಿಡಲಿದೆ ಎಂದು ರೂಪಾಲಿ ತಿಳಿಸಿದ್ದಾರೆ.
ಗಂಗೂಲಿ ಹೃದಯದ ರಕ್ತನಾಳಗಳಲ್ಲಿದ್ದ 3 ಬ್ಲಾಕ್‌ಗಳನ್ನು ಈಗಾಗಲೆ ತೆರವುಗೊಳಿಸಲಾಗಿದೆ. ಒಂದು ಸ್ಟೆಂಟ್ ಕೂಡ ಅಳವಡಿಸಲಾಗಿದೆ. ಈ ನಡುವೆ ಅವರ ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು.

ಗಂಗೂಲಿ ಬುಧವಾರ ಡಿಸ್ಚಾಜ್೯

ಗಂಗೂಲಿ ಬುಧವಾರ ಬಿಡುಗಡೆ ಹೊಂದಿ ಮನೆಗೆ ಮರಳುವ ನಿರೀಕ್ಷೆ ಇದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಆದರೆ ಮುಂದಿನ ಕೆಲ ದಿನಗಳಲ್ಲಿ ಅಥವಾ ವಾರಗಳ ನಂತರ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿ ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ಎನ್ನಲಾಗಿದೆ.

Share This Article
Leave a comment