January 9, 2025

Newsnap Kannada

The World at your finger tips!

honey trap

ಶಾಲಾ ಶಿಕ್ಷಕಿಯಿಂದಲೇ ಹೈಟೆಕ್ ಹನಿ ಟ್ರ್ಯಾಪ್ – ಕವಿತಾ ಬಂಧನ‌

Spread the love

ಹಣದ ಆಸೆಗಾಗಿ ಹೈ ಟೆಕ್ ಹನಿ ಟ್ರ್ಯಾಪ್ ಜಾಲ ಬೀಸುತ್ತಿದ್ದ ಶಿಕ್ಷಕಿಯೊಬ್ಭಳು ಪೋಲಿಸರ ಬಲೆಗೆ ಬಿದ್ದಿದ್ದಾಳೆ.

ಖಾಸಗಿ ಶಾಲಾ ಶಿಕ್ಷಕಿ ಕವಿತಾ ಬಂಧಿತ ಸುಂದರಿ. ಲಾಕ್ ಡೌನ್ ವೇಳೆಯಲ್ಲಿ ಕೆಲಸ ಕಳೆದುಕೊಂಡ ಕವಿತಾ ಹಣಕ್ಕಾಗಿ ತೀವ್ರ ಪರದಾಟ ನಡೆಸುತ್ತಿದ್ದಾಗ ಬಂಡವಾಳ ಇಲ್ಲದೇ ಹಣ ಮಾಡುವ ಐಡಿಯಾ ಮಾಡಿದಾಗ ಕವಿತಾಗೆ ಹೊಳೆದದ್ದು ಹನಿ ಟ್ರ್ಯಾಪ್ ಬಿಜಿನೆಸ್.

ಪ್ರತಿನಿತ್ಯ ಪೇಸ್ ಬುಕ್, ವಾಟ್ಸ್ ಆಪ್ ಮೂಲಕ ಎರಡನೇ ಮದುವೆಗೆ ಬಯಸಿದವರು, ಶ್ರೀಮಂತ ಮಧ್ಯ ವಯಸ್ಕರನ್ನು ಟಾರ್ಗೆಟ್ ಮಾಡಿ ಅವರ ಜೊತೆ ಗೆಳತನ ಆರಂಭಿಸುತ್ತಿದ್ದಳು. ನಂತರ ಅವರನ್ನು ಕೆಲವು ರಾತ್ರಿ ಕಳೆಯುತ್ತಿದ್ದಳು. ಆಗ ಖಾಸಗಿ ಸಮಯದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಳು.

ಕೆಲವು ದಿನಗಳ ನಂತರ ಆ ವ್ಯಕ್ತಿಗೆ ಫೋನ್ ಮಾಡಿ ನೀನು ನನ್ನ ಜೊತೆ ಕಳೆದ ಕ್ಷಣಗಳ ದೃಶ್ಯಗಳನ್ನು ವಿಡಿಯೋ ಮಾಡಿದ್ದೇನೆ. ನೀನು ಇಷ್ಟು ದುಡ್ಡು ಕೊಡು ಅಂತ ಡಿಮ್ಯಾಂಡ್ ಪೀಡಿಸುತ್ತಿದ್ದಳು. ಈ ಕುರಿತಂತೆ ವ್ಯಕ್ತಿ ಯೊಬ್ಬರು ನೀಡಿದ ದೂರಿನ ಬಗ್ಗೆ ಕ್ರಮ ಜರುಗಿಸಿದ ಪೋಲಿಸರು ಕವಿತಾ ಳನ್ನು ವಿಚಾರಣೆಗೆ ಒಳಪಡಿಸಲಾಯಿತು.

ಬೆಂಗಳೂರಿನ ಇಂದಿರಾ ನಗರ ಪೋಲಿಸರು ಶಿಕ್ಷಕಿ ಕವಿತಾ ಮಾಡಿದ್ದ ಎಲ್ಲಾ ಹನಿ ಟ್ರ್ಯಾಪ್ ಪ್ರಕರಣಗಳ ಬಗ್ಗೆ ಸಾಕ್ಷ್ಯ ಸಂಗ್ರಹಿಸಿ ನಂತರ ಬಂಧಿಸಿದರು.‌ ಪ್ರಕರಣ ದಾಖಲು ಆಗಿದೆ .

Copyright © All rights reserved Newsnap | Newsever by AF themes.
error: Content is protected !!