ತುರುಬಿನ ಗಂಟಲಿನಲ್ಲಿ ಡ್ರಗ್ಸ್ ಸ್ಮಗ್ಲಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಉಜ್ಜಯಿನಿ ಪೋಲಿಸರು ಬಂಧಿಸಿದ್ದಾರೆ.
ಉಜ್ಜಯಿನಿಯ ದೇವಾಸ್ ಗೇಟ್ ಬಳಿ ಕಾಂತಾಬಾಯಿ ಎಂಬಾಕೆ ಡ್ರಗ್ಸ್ ಸಾಗಾಣಿಕೆ ಮಾಡಲು ತಲೆ ಕೂದಲಿನ ಗಂಟನ್ನು ಉಪಯೋಗಿಸಿಕೊಂಡಿದ್ದಾಳೆ.
ತಲೆ ಕೂದಲಿನಲ್ಲಿ ಬಟ್ಟೆ ಚೀಲವನ್ನು ಹೇರ್ ಪಿನ್ ಮೂಲಕ ಸುತ್ತಿಕೊಂಡಿ ದ್ದಳು.
ಈ ತುರುಬಿನಲ್ಲಿ 200 ಗ್ರಾಂ ಮಾದಕ ವಸ್ತು ಬಚ್ಚಿಟ್ಟಿಕೊಂಡು ಸುಲಭವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಆಕೆಯ ಮಗಳೂ ಕೂಡಾ ಈ ಪ್ರಕರಣದಲ್ಲಿ ಭಾಗಿದಾರಳಾಗಿದ್ದಾಳೆ ಎಂದು ಗೊತ್ತಾಗಿದೆ.
ಈ ಕುರಿತಂತೆ ಖಚಿತ ಮಾಹಿತಿ ಪಡೆದ ದೇವಾಸ್ ಗೇಟ್ ಪೊಲೀಸರು ಕಾಂತಾಬಾಯಿಯನ್ನು ಬಂಧಿಸಿದ್ದಾರೆ.200 ತೂಕದ ಈ ಡ್ರಗ್ಸ್ ಬೆಲೆ ಸುಮಾರು 20 ಲಕ್ಷಕ್ಕೂ ಹೆಚ್ಚು ಎಂದು ಗೊತ್ತಾಗಿದೆ.
ಈ ಪ್ರಕರಣ ಸಂಬಂಧಿಸಿದಂತೆ ಕಾಂತಾಬಾಯಿ ಜೊತೆಗೆ ಆಕೆಯ ಮಗಳು ಸೇರಿದಂತೆ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ದೀಪಿಕಾ ಶಿಂದೆ ಹೇಳಿದ್ದಾರೆ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು