March 14, 2026

Newsnap Kannada

The World at your finger tips!

school , learning , teaching

C B S E ಪರೀಕ್ಷೆಗೆ ದಿನಾಂಕ ಪ್ರಕಟ : ಮೇ 4 ರಿಂದ 10 – 12 ತರಗತಿಯ ಪರೀಕ್ಷೆಗಳು – ಸಚಿವ ಫೋಖ್ರಿಯಾಲ್

Spread the love

2021ರ ಮೇ 4 ರಿಂದ ಜೂನ್ 10 ರವರೆಗೆ ಸಿಬಿಎಸ್ಇ ಯ 10 ಮತ್ತು 12 ನೇ ತರಗತಿ ಪರೀಕ್ಷೆ ಗಳು ನಡೆಯಲಿವೆ.

ಈ ವಿಷಯವನ್ನು ಗುರುವಾರ ಪ್ರಕಟಿಸಿದ ಕೇಂದ್ರ ಮತ್ತು ರಾಜ್ಯ ಪ್ರೌಢಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳ ದಿನಾಂಕಗಳ ವಿವರ ನೀಡಿದರು.

ಸಿಬಿಎಸ್ಇ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆ ಮೇ 4ರಿಂದ ಆರಂಭವಾಗಲಿದೆ. ಜೂನ್ 10ಕ್ಕೆ ಬೋರ್ಡ್ ಪರೀಕ್ಷೆ ಮುಕ್ತಾಯವಾಗಲಿದೆ.
ಅದಕ್ಕಿಂತ ಮುಂಚೆ ಅಂದರೆ ಮಾಚ್೯ 10 ರಂದು ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ, ಜುಲೈ 10 ರೊಳಗೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.

ಸಾಮಾನ್ಯವಾಗಿ ಜನವರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತವೆ ಮತ್ತು ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಸಿದ್ಧಾಂತ ಪರೀಕ್ಷೆಗಳು ಆರಂಭವಾಗಿ ಮಾರ್ಚ್ ನಲ್ಲಿ ಮುಕ್ತಾಯವಾಗುತ್ತಿತ್ತು. ಈ ಬಾರಿ ಕರೋನಾ ವೈರಸ್ ನಿಂದಾಗಿ ಎಲ್ಲವೂ ಬದಲಾಗಿದೆ ಎಂದರು.

error: Content is protected !!