February 20, 2026

Newsnap Kannada

The World at your finger tips!

acb 1

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ನಿವಾಸದ ಮೇಲೆ ಎಸಿಬಿ ಧಾಳಿ

Spread the love

ಶಿವಮೊಗ್ಗದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಜಿ ಜಿ ಸುರೇಶ್ ನಿವಾಸದ ಮೇಲೆ ಎಸಿಬಿ‌ ಅಧಿಕಾರಿ ಧಾಳಿ ಮಾಡಿದ್ದಾರೆ.

ಸುರೇಶ್ ಅವರಿಗೆ ಸೇರಿದ ಶಿವಮೊಗ್ಗದ ಮಲ್ಲೇಶ್ವರ, ಗೋಪಾಲಗೌಡ ಬಡಾವಣೆಯ ನಿವಾಸಗಳು ಭದ್ರಾವತಿ ಹುಣಸೇಕಟ್ಟೆಯಲ್ಲಿರುವ ಫಾರಂ ಹೌಸ್ ಹಾಗೂ ಅಧಿಕಾರಿಯ ಕಚೇರಿಯ ಮೇಲೆ ಏಕಕಾಲಕ್ಕೆ ಧಾಳಿ ಮಾಡಿದ್ದಾರೆ.

ಈ ಧಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಹಾಗೂ ಕೆಲವು ದಾಖಲೆಯನ್ನು ವಶ ಪಡಿಸಿಕೊಳ್ಳ ಲಾಗಿದೆ ಎಂದು ಗೊತ್ತಾಗಿದೆ.
ಭ್ರಷ್ಟಾಚಾರ ನಿಗ್ರಹ ದಳ ಎಸ್ಪಿ ಜಯ ಪ್ರಕಾಶ್, ಡಿವೈಎಸ್ಪಿ ಲೋಕೇಶ್ ಸೇರಿದಂತೆ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು
ಧಾಳಿಯ ವೇಳೆ ವಶ ಪಡಿಸಿಕೊಂಡ ವಸ್ತುಗಳ ವಿವರಗಳು ಬರಬೇಕಿದೆ.

error: Content is protected !!