February 20, 2026

Newsnap Kannada

The World at your finger tips!

electionperson

ಕರ್ತವ್ಯ ನಿರತ ಚುನಾವಣಾಧಿಕಾರಿ ಪಿರಿಯಾಪಟ್ಟಣದಲ್ಲಿ ಸಾವು

Spread the love

ಮತ ಎಣಿಕೆ ಕೇಂದ್ರದಲ್ಲೇ ಹೃದಯಾಘಾತದಿಂದ ಚುನಾವಣಾಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಬುಧವಾರ ಬೆಳಿಗ್ಗೆ ಜರುಗಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಎನ್. ಶೆಟ್ಟಹಳ್ಳಿ ಗ್ರಾಮ ಪಂಚಾಯತ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿಯೋಜನೆಗೊಂಡಿದ್ದ ಲೋಕೋಪಯೋಗಿ ಇಲಾಖೆ ಅಭಿಯಂತರ ಬೋರೇಗೌಡ (52) ನಿಧನರಾದವರು.

ಪಟ್ಟಣದ ಪುಷ್ಪ ವಿದ್ಯಾಸಂಸ್ಥೆಯ ಆವರಣದಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಬೆಳಿಗ್ಗೆ 7ಗಂಟೆಗೆ ಕರ್ತವ್ಯ ನಿಯೋಜನೆ ಗೆ ಆಗಮಿಸಿದ ಬೋರೇಗೌಡರು ಸಹೋದ್ಯೋಗಿಗಳೊಂದಿಗೆ ತಿಂಡಿ ಮುಗಿಸಿ ಮತ ಎಣಿಕೆ ಕೇಂದ್ರದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಎದೆನೋವು ಕಾಣಿಸಿಕೊಂಡಿತು.

ಕೂಡಲೇ ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹುಣಸೂರು ಬಳಿಯ ಮಾರ್ಗಮಧ್ಯೆ ಹೃದಯಾಘಾತದಿಂದ ಬೋರೆಗೌಡ ಕೊನೆಯುಸಿರೆಳೆದಿದ್ದಾರೆ.

error: Content is protected !!