ಹೊಸ ವರ್ಷಾಚರಣೆಗೆ ಬ್ರೇಕ್ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಯ ಕ್ರಮವನ್ನು ಕೈ ಬಿಟ್ಟು ಈಗ ಕೇವಲ ಡಿ 31 ರಾತ್ರಿ ಸೆಕ್ಷನ್ 144 ಜಾರಿ ಮಾಡಲು ನಿರ್ಧರಿಸಲಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿ, ಹೊಸ ವರ್ಷದ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದರು.
- 31ರ ರಾತ್ರಿ ಬೆಂಗಳೂರಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ.
- ಯಾರೊಬ್ಬರೂ ಸಾರ್ವಜನಿಕ ಪ್ರದೇಶದಲ್ಲಿ ಗುಂಪು ಸೇರುವಂತಿಲ್ಲ.
- ಯಾವುದೇ ರಸ್ತೆಗಳ ಮೇಲೆ ಸೆಲೆಬ್ರೇಷನ್ ಮಾಡಲು ಅವಕಾಶ ಇರುವುದಿಲ್ಲ. ಖಾಸಗಿ ಕ್ಲಬ್ಗಳು, ಅಪಾರ್ಟ್ಮೆಂಟ್ಗಳಲ್ಲಿ ನಿವಾಸಿಗಳು ಹೊಸ ವರ್ಷ ಆಚರಣೆ ಮಾಡಬಹುದು.
- ಬ್ಯಾಂಡ್, ಮ್ಯೂಸಿಕ್ ಕಾರ್ಯಕ್ರಮ ಗಳನ್ನು ಆಯೋಜಿಸುವಂತಿಲ್ಲ.
- ಹೊಸ ವರ್ಷಾಚರಣೆ ವೇಳೆ ಡಿಜೆ ವ್ಯವಸ್ಥೆಗೆ ಅವಕಾಶವಿಲ್ಲ
- ರೆಸ್ಟೋರೆಂಟ್, ಪಬ್, ಕ್ಲಬ್ಗಳಲ್ಲಿ ಕಡ್ಡಾಯವಾಗಿ ಕೊವಿಡ್-19 ನಿಯಮಗಳನ್ನು ಪಾಲಿಸಬೇಕು.
- ಗ್ರಾಹಕರಿಗೆ ಅಡ್ವಾನ್ಸ್ ಬುಕಿಂಗ್ಗೆ ಅವಕಾಶ ನೀಡಬೇಕು. ಪಬ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಶೇ.50ರಷ್ಟು ಗ್ರಾಹಕರು ಬರಲು ಮಾತ್ರ ಅವಕಾಶ ನೀಡಬೇಕು.
- ಕೂಪನ್ ಪಡೆದ ಗ್ರಾಹಕರು ಮಾತ್ರ ಹೋಟೆಲ್ ಒಳಗೆ ಇರಬೇಕು. ಅವರು ರಸ್ತೆಗೆ ಬಂದು ಸೆಲಬ್ರೇಷನ್ ಮಾಡಬಾರದು
- ರಾತ್ರಿ ಕಚೇರಿಯಿಂದ ಮನೆಗೆ ತೆರಳುವವರಿದ್ದರೆ, ಆಸ್ಪತ್ರೆಗೆ ಹೋಗುವವರಿದ್ದರೆ ಇಲ್ಲವೆ ಇತರೆ ಯಾವುದೇ ಅಗತ್ಯ ಸೇವೆಗಾಗಿ ಸಂಚಾರ ನಡೆಸಬಹುದು
- ರಾತ್ರಿ ಜಾಲಿ ರೈಡ್ ಉದ್ದೇಶ ಇಟ್ಟುಕೊಂಡು ಸಂಚಾರ ನಡೆಸಿದರೆ
ವಾಹನ ಜಪ್ತಿ ಲೈಸನ್ಸ್ ರದ್ದು ಮಾಡಲಾಗುವುದು. - ಬೆಂಗಳೂರು ನಗರಾದ್ಯಂತ ಡಿ 31 ರಂದು ರಾತ್ರಿ ಡ್ರಂಕ್ ಮತ್ತು ಡ್ರೈವ್ ತಪಾಸಣೆ ಮಾಡುತ್ತೇವೆ.
- ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಕೆಲವರು ಫ್ಲೈಓವರ್ಗಳ ಮೇಲೆ ವಾಹನ ನಿಲ್ಲಿಸಿ ಗಲಾಟೆ ಮಾಡುತ್ತಾರೆ. ಇದಕ್ಕೆ ಬ್ರೇಕ್ಹಾಕುವ ಉದ್ದೇಶದಿಂದ ಡಿ.31ರಂದು ರಾತ್ರಿ 8 ಗಂಟೆಯಿಂದ ಫ್ಲೈಓವರ್ಗಳು ಬಂದ್ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.
- ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ